BBK-13 ಬಿಗ್ ಬಾಸ್ ವಿಮಾನ ಏರಿದ 16 ಸ್ಪರ್ಧಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ

BBK-13 ಬಿಗ್ ಬಾಸ್ ವಿಮಾನ ಏರಿದ 16 ಸ್ಪರ್ಧಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಗೆ ಯಾರು ಯಾರು ಪ್ರವೇಶ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದ್ದ ಹೆಸರುಗಳು ಕೆಲವೊಬ್ಬರು ಮಾತ್ರ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿದ್ದಾರೆ .ಈ ವಿಷಯದಲ್ಲಿ ಮೊದಲನೇ ದಿನವೇ ಕರ್ನಾಟಕದ ಜನರಿಗೆ ಬಿಗ್ ಬಾಸ್ ಅಚ್ಚರಿ ಮೂಡಿಸಿದ್ದಾರೆ.ಕಿಚ್ಚ ಸುದೀಪ್ ಪ್ರತಿ ಸ್ಪರ್ಧಿಗಳಿಗೆ ಬೋರ್ಡಿಂಗ್ ಪಾಸ್ ಕೊಡುವುದರ ಮೂಲಕ BBK13 ಮನೆಯ ಜರ್ನಿಗೆ ಶುಭ ಹಾರೈಸಿದ್ದಾರೆ.

1.ಜಗ್ಗ ಮಮ್ಮಿ

ಲವ್ ಮೋಕ್ಟ್ರೈಲ್ 3 ಖ್ಯಾತಿಯ ಜಗ್ಗ ಮಮ್ಮಿ ಮೊದಲನೇ ಸ್ಪರ್ಧಿಯಾಗಿ BBK13 ಮನೆಗೆ ಪ್ರವೇಶಿಸಿದ್ದಾರೆ.ಲವ್ ಮೋಕ್ಟ್ರೈಲ್ 3 ಚಿತ್ರದಲ್ಲಿನ ಮುಗ್ದತೆ ನಿಜ ಜೀವನದಲ್ಲಿಯೂ ಇದ್ದಂತೆ ಕಾಣುತಿತ್ತು.ಸುದೀಪ್ ಅವರು ಅವರನ್ನು ಕಾಲೆಳೆಯುತ್ತಾ ಮಾತನಾಡಿಸಿದರು.ನಂತರ ಬೋರ್ಡಿಂಗ್ ಪಾಸ್ ಕೊಟ್ಟು ದೊಡ್ಮನೆ ಪ್ರವೇಶಕ್ಕೆ ಅಸ್ತು ಎಂದರು.

2.ಸೌಂದರ್ಯ ಶೆಟ್ಟಿ

ಮೂಲತಃ ಮಂಗಳೂರಿನ ಮಾಡೆಲ್,ನಟಿ, ಕಂಟೆಂಟ್ ಕ್ರಿಯೇಟರ್ ಹಾಗೂ ರಿಯಾಲಿಟಿ ಶೋ ನ ಸ್ಪರ್ಧಿಯಾಗಿದ್ದಸೌಂದರ್ಯ ಶೆಟ್ಟಿ ಅವರು ಬಿಗ್ ಬಾಸ್ ಮನೆಯ 2ನೇ ಸ್ಪರ್ಧಿಯಾಗಿ BBK13 ಮನೆಗೆ ಪ್ರವೇಶಿಸಿದ್ದಾರೆ.Mental Ho Jawa ಎಂಬ ಟಗರು ಚಲನಚಿತ್ರದ ಹಾಡಿನ ನೃತ್ಯ ಮಾಡುವುದರ ಮುಖಾಂತರ ಸ್ಟೇಜ್ ಗೆ ಎಂಟ್ರಿ ಕೊಟ್ಟರು.ನೋಡಲು ಚೆಂದ ಕಾಣಿಸಿದರು ಒಳ್ಳೆ ಖಾರವಾದ ವ್ಯಕ್ತಿತ್ವ ವುಳ್ಳವರು ಎಂದು ಮೇಲ್ನೋಟಕ್ಕೆ ಕಾಣಿಸುತಿತ್ತು.

3.ಅವಿನಾಶ್ ಶತಮರ್ಶನ

ಅವಿನಾಶ್ ಶತಮರ್ಶನ ಈ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೂ ಕೇಳಿರಲಿಲ್ಲ.ಅವರ ಆಗಮನ ಎಲ್ಲರಿಗು ಅಚ್ಚರಿ ಮೂಡುವಂತೆ ಮಾಡಿತ್ತು.ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ ನನ್ನ ಮೇಲೆ ನನಗೀಗ ಅನುಮಾನ ಶುರುವಾಗಿದೆ ಎಂಬ ಹಾಡಿನಿಂದ ಕನ್ನಡಿಗರ ಮನ ಗೆದ್ದಿದ್ದರು.ತುಂಬಾ ರಗಡ್ ವ್ಯಕ್ತಿಯಂತೆ ಕಾಣುವ ಇವರು ಜೀವನವನ್ನು ತುಂಬಾ ಅರ್ಥ ಮಾಡಿಕೊಳ್ಳಲು ಹೋಗಿ ಸೋತವರಂತೆ ಕಂಡರು.ಜೀವನದಲ್ಲಿ ಗೆಲ್ಲೊ ಹಂಬಲದಿಂದ ಬಿಗ್ ಬಾಸ್ ಮನೆಗೆ ಬಂದವರಂತೆ ಕಾಣುತಿತ್ತು .ಟ್ರೋಫಿ ಗೆಲ್ಲುತ್ತೇನೋ ಇಲ್ಲವೋ ಗೊತ್ತಿಲ್ಲ ಆದ್ರೆ ಜೀವನದಲ್ಲಿ ಗೆಲ್ಲುತ್ತೇನೆ ಎಂಬ ವಿಶ್ವಾಸದಿಂದ BBK13 ಮನೆಗೆ ಮೂರನೇ ಸ್ಪಧಿಯಾಗಿ ಪ್ರವೇಶಿಸಿದರು.

4.ಪ್ರಥಮ ಪ್ರಸಾದ್

ಈ ಹೆಸರು ಸಹ ಜಾಲತಾಣಗಳಲ್ಲಿ ಎಲ್ಲಿಯೂ ಕೇಳಿ ಬಂದಿರಲಿಲ್ಲ.ಪ್ರಥಮ ಪ್ರಸಾದ್ ನಟಿ, ಈಜುಗಾರ್ತಿ ಅದ ಇವರು ಕನ್ನಡ ಚಲಚಿತ್ರದ ಮೇರು ನಟರಲ್ಲಿ ಒಬ್ಬರಾದ ವಿನಯ ಪ್ರಸಾದ್ ರ ಮಗಳು.ಅವರ ಪ್ರತಿಭೆಗೆ ತಕ್ಕಂತೆ ಸಿನಿರಂಗದಲ್ಲಿ ಬೆಳೆಯಲು ಆಗಿಲ್ಲ ಎಂಬ ಕೊರಗು ಅವರಲ್ಲಿತ್ತು .ವಿನಯ ಪ್ರಸಾದ್ ಅವರನ್ನು ಸ್ಟೇಜ್ ಗೆ ಕರೆತರುವುದರ ಮೂಲಕ ಗೌರವ ಕೊಟ್ಟರು.ಪ್ರಥಮ ಪ್ರಸಾದ್ BBK13 ಮನೆಗೆ 4ನೇ ಸ್ಪರ್ಧಿಯಾಗಿ ಪ್ರವೇಶಿಸಿದರು.

5.ಗಗನ್ ಚಿನ್ನಪ್ಪ

ಮೂಲತಃ ಕೊಡಗಿನವರಾದ ಗಗನ್ ಚಿನ್ನಪ್ಪ ಅವರು ಕನ್ನಡ ಕಿರುತೆರೆಯ ಜನಪ್ರಿಯ ನಟ. ‘ಮಂಗಳಗೌರಿ ಮದುವೆ’ ಧಾರಾವಾಹಿಯ ಮೂಲಕ ಗಗನ್ ಚಿನ್ನಪ್ಪ ಅವರು ಕನ್ನಡ ಕಿರುತರೆಗೆ ಎಂಟ್ರಿ ಕೊಟ್ಟಿದ್ದರು.ರಾಜೀವನ ಪಾತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು.ಈಗ ಜೀ ಕನ್ನಡ ವಾಹಿಯ ಸೀತಾರಾಮ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಚಿಕ್ಕಂದಿನಿಂದಲೂ ನಟನೆಯಲ್ಲಿ ಆಸಕ್ತಿ ಹೊಂದಿದ್ದ ಇವರು ಕೆಲ್ಸದ ಬಿಡುವಿನ ವೇಳೆಯಲ್ಲಿ ಆಡಿಷನ್ ಗೆ ಹೋಗುತ್ತಿದ್ದರು.BBK13 ಮನೆಗೆ 5ನೇ ಸ್ಪರ್ಧಿಯಾಗಿ ಪ್ರವೇಶಿಸಿದರು.

6.ಸಂಗೀತಾ ಭಟ್

2018 ರಲ್ಲಿ #MeToo ಎಂದು ಹಾಕಿದ ಒಂದು ಪೋಸ್ಟ್ ಅವರ ಜೀವನದ ದಿಕ್ಕನೇ ಬದಲಿಸಿತು.ಈ ಕುಖ್ಯಾತಿ ಹೊಂದಿದ್ದ ಸಂಗೀತ ಭಟ್ ನಂತರದ ದಿನಗಳಲ್ಲಿ ನಟನೆ ಕ್ಷೇತ್ರದಿಂದ ವಿರಾಮ ತೆಗೆದುಕೊಂಡು ದೇಶ ವಿದೇಶ ಸುತ್ತಿದರು.ಪಂಜರದ ಗಿಳಿ ಎಂಬ ಧಾರಾವಾಹಿಯಿಂದ ತಮ್ಮ ವೃತ್ತಿಜೀವನ ಶುರುಮಾಡಿದರು.ಮುಂದೆ ಭಾಗ್ಯವಂತರು ,ಚಂದ್ರಚಕೋರಿ ಸೀರಿಯಲ್ ನಲ್ಲಿ ನಟಿಸಿದರು.ಪ್ರೀತಿ ಗೀತಿ ಇತ್ಯಾದಿ ಎಂಬ ಸಿನಿಮಾದ ಮುಖಾಂತರ ಸಿನಿಮಾರಂಗಕ್ಕೂ ಕಾಲಿಟ್ಟರು.ಕಿರುತೆಯಲ್ಲಿ ಮತ್ತು ಸಿನಿಮಾರಂಗದಲ್ಲಿ ಮಿಂಚಿದ ಅನುಭವದಿಂದ ಇಂದು BBK13ರ ಮನೆಗೆ 6ನೇ ಸ್ಪರ್ಧಿಯಾಗಿ ಪ್ರವೇಶ ಪಡೆದರು.

7.ಕಾವ್ಯ ಗೌಡ

ಭಾಗ್ಯಲಕ್ಷ್ಮಿ ಎಂಬ ಸೀರಿಯಲ್ ಮುಖಾಂತರ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದ ಕಾವ್ಯ ಗೌಡ ಅವರು ಪಟ ಪಟ ಪಟಾಕಿಯಂತೆ ಮಾತಾಡುವ ಶ್ರೇಷ್ಟ ಎಂಬ ಪಾತ್ರದ ಮೂಲಕ ಮನೆ ಮನೆಗೂ ತಮ್ಮ ಹೆಸರು ಪರಿಚಯಮಾಡಿಕೊಂಡಿದ್ದಾರೆ. ಇವರ ಆಗಮನದಿಂದ ಮನೆಯಲ್ಲಿ ಫ್ರೆಶ್ ಡೋಸ್ ಮತ್ತು ಮನೋರಂಜನೆಗೆ ಮತ್ತಷ್ಟು ಮೆರಗು ಸಿಗಲಿದೆ.ಕಾವ್ಯ ಗೌಡ ಅವರು BBK13 ಮನೆಗೆ 7ನೇಯ ಸ್ಪರ್ಧಿಯಾಗಿ ಪ್ರವೇಶ ಪಡೆದರು.

8.ಓಂ ಪ್ರಕಾಶ್ ರಾವ್

ಬಿಗ್ ಬಾಸ್ ಕನ್ನಡ ಸೀಸನ್ 4ರಲ್ಲಿ ವೈಲ್ಡ್ ಕಾರ್ಡ್ ಆಗಿ ಮನೆಗೆ ಪ್ರವೇಶಿಸಿದ್ದ ಓಂ ಪ್ರಕಾಶ್ ರಾವ್ ಒಂದು ಕಾಲದ ಕನ್ನಡ ಸಿನಿಮಾ ರಂಗದ ಹೆಸರಾಂತ ನಿರ್ದೇಶಕ.ಕನ್ನಡ ಸಾಕಷ್ಟು ಚಲಚಿತ್ರಗಳಲ್ಲಿ ನಟಿಸಿ ,ನಿರ್ದೇಶಿಸಿ ತಮ್ಮದೇ ಆದ ಜನಪ್ರಿಯತೆ ಗಳಿಸಿದ್ದಾರೆ .ಕನ್ನಡದ ಪ್ರಮುಖ ನಾಯಕರ ಜೊತೆಗೆ ನಟಿಸುವುದಷ್ಟೇ ಅಲ್ಲದೆ ಅವರಿಗೆ ನಿರ್ದೇಶನ ಮಾಡಿದ ಅನುಭವ ಇರುವ ಓಂ ಪ್ರಕಾಶ್ ರಾವ್ ಅವರು ಈ ಬಾರಿ BBK13 8ನೇಯ ಸ್ಪರ್ಧಿಯಾಗಿ ಪ್ರವೇಶ ಪಡೆದರು.

https://en.wikipedia.org/wiki/Om_Prakash_Rao

9.ಕಿರಣ್ ಶಾಸ್ತ್ರಿ

UK ಹುಲಿ ಎಂದೇ ಪ್ರಸಿದ್ದಿಯಾದ ಅಪ್ಪಟ ಜವಾರಿ ಮಾತು ಹಾಗು ಮುಗ್ದತೆಯಿಂದ ಗಮನ ಸೆಳೆಯಲು ಬಂದಿದ್ದಾರೆ ಕಿರಣ್ ಶಾಸ್ತ್ರೀ .ಮೂಲತಃ ಉತ್ತರ ಕರ್ನಾಟಕದ ಇವರು ಸಾಮಾನ್ಯ ವ್ಯಕ್ತಿಯಾಗಿ ಬಿಗ್ ಬಾಸ್ ನಡೆಸುವ ಅಗ್ನಿ ಪರೀಕ್ಷೆ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೆದ್ದು ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಆಯ್ಕೆ ಆಗಿದ್ದಾರೆ.ಮೊದಲನೇ ಅಗ್ನಿಪರೀಕ್ಷೆ ಸ್ಪರ್ಧಿಯಾಗಿ ಹಾಗು ಸೀಸನ್ 13 ರ 9ನೇ ಸ್ಪರ್ಧಿಯಾಗಿ BBK13 ಮನೆ ಪ್ರವೇಶಿಸಿದ್ದಾರೆ.

10.ಆಸಿಯಾ ಫಿರ್ದೋಸ್

ಕನ್ನಡದ ಕಿರುತೆರೆ ನಟಿಯಾದ ಅಸಿಯಾ ಫಿರ್ದೋಸ್ ಅವರು ಶ್ರಾವಣಿ ಸುಬ್ರಮಣ್ಯ ಹಾಗೂ ಕನ್ಯಾಕುಮಾರಿ ಧಾರವಾಹಿಗಳಲ್ಲಿ ನಟನೆ ಮಾಡಿ ತಮ್ಮ ಚಾಪನ್ನು ಮೂಡಿಸಿದ್ದಾರೆ.ತುಂಬಾ ಸಂಪ್ರದಾಯಬದ್ಧ ಕುಟುಂಬದಿಂದ ಬಂದಿದ್ದ ಇವರು ನಟನೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವ ನಿರ್ಧಾರವನ್ನು ಅವರ ತಾಯಿ ಮೊದಲಿಗೆ ಒಪ್ಪಿರಲಿಲ್ಲ .ನಂತರ ನನಗೆ ನಟನೆಯ ಮೇಲಿದ್ದ ಆಸಕ್ತಿ ಕಂಡು ನಂತರ ಒಪ್ಪಿ ತನಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಹೇಳಿಕೊಂಡರು. BBK13 ಸೀಸನ್ 13 ರ 10ನೇ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ್ದಾರೆ.

11.ಲಿಖಿತ್ ಗೊಂದಿ  

ತಂದೆ ಜೊತೆ ಸೇರಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಮಾಡುತ್ತಿದ್ದ ಇವರು ದೈಹಿಕ ಸಾಮರ್ಥ್ಯ ಮತ್ತು ಅತ್ಯಂತ ಚುರುಕಿನ ಬುದ್ದಿ ಉಳ್ಳವರು.ಇವರ ಈ ಸ್ಕಿಲ್ಸ್ ಉಳಿದ ಸ್ಪರ್ಧಿಗಳಿಗೆ ಹೇಗೆ ಪೈಪೋಟಿ ನೀಡುತ್ತವೆ ಎಂದು ಕಾದುನೋಡಬೇಕಿದೆ.ತಂದೆ ಮಗನ ಭಾಂದವ್ಯ ನೋಡುಗರ ಕಣ್ಸೆಳೆದು ಫೇಮಸ್ ಆದ ನಂತರ ಸಾಮಾನ್ಯ ವ್ಯಕ್ತಿಯಾಗಿ ಬಿಗ್ ಬಾಸ್ ನಡೆಸುವ ಅಗ್ನಿ ಪರೀಕ್ಷೆಯಲ್ಲಿ ಗೆದ್ದು BBK13 ಕನ್ನಡ ಸೀಸನ್ 13ಕ್ಕೆ ಆಯ್ಕೆ ಆಗಿದ್ದಾರೆ.ಈ ಬಾರಿ ಬಿಗ್ ಬಾಸ್ ಮನೆಗೆ 11ನೇ ಸ್ಪರ್ಧಿಯಾಗಿ ಮನೆ ಪ್ರವೇಶ ಮಾಡಿದ್ದಾರೆ.

12.ತಾಂಡವ್ ರಾಮ್

ಮೂಲತಃ ಹಾಸನ ಜಿಲ್ಲೆಯಾದ ಇವರು ನಟನೆ ಹಾಗೂ ರಂಗಭೂಮಿ ಕಲಾವಿದರು.ಜೀ ಕನ್ನಡ ವಾಹಿನಿಯಲ್ಲಿ ಪ್ರಸವವಾದ ಜೋಡಿಹಕ್ಕಿ ಧಾರಾವಾಹಿಯ ರಾಮನ ಎನ್ನೋ ಪಾತ್ರದಿಂದ ಜನಪ್ರಿಯತೆ ಗಳಿಸಿದವರು.ದೇಹವನ್ನು ಹುರಿಗೊಳಿಸುವ ಅಭ್ಯಾಸವಿರುವ ಇವರು ಸೀರಿಯಲ್ ಜೊತೆ ಜೊತೆಗೆ ದೇಹಾರ್ಡ್ಯ ಸ್ಪರ್ಧೆಯಲ್ಲೂ ಭಾಗವಹಿಸಿ ಹಲವಾರು ಪ್ರಶಸ್ತಿ ಗೆದ್ದಿದ್ದಾರೆ.ಸದ್ಯ ಕೊಲೆ ಯತ್ನ ಕೇಸ್ ಅಡಿಯಲ್ಲಿ  ಬೈಲ್ ಮೇಲೆ ಹೊರ ಇರುವ ಇವರು ಬಿಗ್ ಬಾಸ್ ಮನೆಗೆ ತಮ್ಮ ಅದೃಷ್ಟ ಪರೀಕ್ಷೆಗೆ ಬಂದಿದ್ದಾರೆ.ನ್ಯಾಯಾಂಗ ಹೋರಾಟದಲ್ಲಿ ಇರುವ ಇವರು BBK13 ಮನೆಯ 12ನೇ ಸ್ಪರ್ಧಿಯಾಗಿ ಮನೆಗೆ ಪ್ರವೇಶಿಸಿದ್ದಾರೆ.

13.ವೈಷ್ಣವಿ ಕೌಂಡಿನ್ಯ

ʻಶಾಂತಂ ಪಾಪಂʼ ಸರಣಿಯ ಚಿಕ್ಕ ಪಾತ್ರದ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಇವರು ನಂತರ ಅವರ ಪ್ರತಿಭೆಯನ್ನ ಗುರುತಿಸಿದ ವಾಹಿನಿಯು ʻಮಿಥುನ ರಾಶಿʼ ಧಾರಾವಾಹಿಗೆ ನಾಯಕಿಯಾಗಿ ಆಯ್ಕೆ ಮಾಡಿತು.ಸದಾ ಸಿರಿಯಲ್ಸ್ ನಲ್ಲಿ ಯಾವುದಾದರೂ ಒಂದು ಪಾತ್ರದಲ್ಲಿ ಮಿಂಚುತಿದ್ದ ವೈಷ್ಣವಿ ಈಗ ಕರ್ನಾಟಕದ ಅತಿದೊಡ್ಡ ರಿಯಾಲಿಟಿ ಶೋ ನಲ್ಲಿ ತಮ್ಮ ನಿಜವಾದ ವ್ಯಕ್ತಿತ್ವದ ಆಟಕ್ಕೆ ಸಜ್ಜಾಗಿದ್ದಾರೆ. ಕೆಲ ದಿನಗಳ ಹಿಂದೆ ಇವರ ನಟನೆಯ ʻಪ್ರೇಮಕಾವ್ಯʼ ಎಂಬ ಧಾರಾವಾಹಿ ಮುಕ್ತಾಯಗೊಂಡಿದ್ದು, ಈ ಬೆನ್ನಲ್ಲೇ ʻBBK13ʼಗೆ 13ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

14.ಧನುಷ್ ಮಂಜುನಾಥ್

ಸೈಕ್ಲಿಂಗ್ ನಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿರುವ ಧನುಷ್ ಮಂಜುನಾಥ್ ಭಾರತದಲ್ಲಿ ಸರಿ ಸುಮಾರು 24000 ಕಿಲೋಮೀಟರು ಸೈಕಲ್ ತುಳಿದಿದ್ದಾರೆ.ಇವರು ಇದೆ ಸೈಕಲ್ ಸವಾರಿಗೆ ಮೆಚ್ಚಿದ ರಾಜ್ಯ ಸರ್ಕಾರ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಿದೆ.ಬಿಗ್ ಬಾಸ್ ಅಗ್ನಿಪರೀಕ್ಷೆ ಯಲ್ಲಿ ಪಾಸ್ ಆಗಿ ʻBBK13ʼಗೆ 14ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

15.ಯಶಸ್ ಕೃ ಷ್ಣ

ಪವಿತ್ರ ಬಂಧನ ಸೀರಿಯಲ್ ನ ತಿಲಕ್ ಎಂಬ ಪಾತ್ರದಲ್ಲಿ ನಟಿಸಿ ಎಲ್ಲ ಧಾರಾವಾಹಿ ಪ್ರೇಮಿಗಳ ಮನಸ್ಸು ಗೆದ್ದಿದ್ದ ಯಶಸ್ ಕೃಷ್ಣ ಇದೀಗ BBK13 ಮನೆಯ 15ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.ಈಗ ನನಗೆ ಅವಕಾಶಗಳು ಕಡಿಮೆ ಇವೆ .ಆದ್ದರಿಂದ ನನ್ನ ಈ ಬಿಗ್ ಬಾಸ್ ಪ್ರಯಾಣವು ಹೆಚ್ಚಿನ ಅವಕಾಶಗಳು ಒದಗಿಸಿ ಕೊಡುತ್ತದೆ ಎಂಬ ನಂಬಿಕೆಯಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದರು

16.ಮಾಡ್ರನ್‌ ಮಹಾಕವಿ ಮಂಜ

ಬಿಗ್ ಬಾಸ್ ನ ಅಗ್ನಿಪರೀಕ್ಷೆಯ ಟಾಸ್ಕ್ ಒಂದರಲ್ಲಿ ಅರ್ಧ ತಲೆ ಬೋಳಿಸಿಕೊಳ್ಳುವುದರ ಮೂಲಕ ಎಲ್ಲರ ಚರ್ಚೆಗೆ ಕಾರಣವಾಗಿದ್ದ ಮಾಡ್ರನ್‌ ಮಹಾಕವಿ ಮಂಜ ಇದೀಗ ಬಿಗ್ ಬಾಸ್ ಮನೆಯ ಕೊನೆಯ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ಅವರ ದೃಢನಿರ್ಧಾರ ತಮ್ಮನ್ನು ಈ ಸ್ಟೇಟ್ ಮೇಲೆ ನಿಲ್ಲಿಸಿದೆ ಎಂದು ಹೆಮ್ಮೆಯಿಂದ ಹೇಳಿದರು.ಇವರು ಅಗ್ನಿಪರೀಕ್ಷೆಯ ತೀರ್ಪುಗಾರರು ಆಯ್ಕೆ ಮಾಡಿದ ಸ್ಫರ್ಧಿಯಾಗಿದ್ದು BBK13 ಮನೆಯ ಕಠಿಣ ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಕಳೆದ ಬಾರಿ ಒಟ್ಟು 19 ಸ್ಪರ್ಧಿಗಳು ‘BBK13’ ಮನೆಯೊಳಗೆ ಪ್ರವೇಶ ಪಡೆದಿದ್ರು. ಆದರೇ , ಈ ಬಾರಿ 16 ಸ್ಪರ್ಧಿಗಳಿಗೆ ಮಾತ್ರ ಜಾಗವಿದೆ.ಅಂದರೆ ಮುಂದಿನ ದಿನಗಳಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಡುತ್ತಾರೆ ಎಂಬ ಅನುಮಾನ ಈಗಾಗಲೇ ಶುರುಮಾಗಿದೆ.ಈ 16 ಸ್ಪರ್ಧಿಗಳು ಕನ್ನಡ ಜನತೆಗೆ ಯಾವ ರೀತಿ ಮನೋರಂಜನೆ ಕೊಡುತ್ತಾರೆ,ಇದರಲ್ಲಿ ಗೆಲ್ಲೋರು ಯಾರು ಎಂಬುದೇ ಸದ್ಯದ ಕುತೂಹಲ.ಈ ಉತ್ತರಕ್ಕೆ ಇನ್ನು 100ದಿನ ಕಾಯಬೇಕಿದೆ.

ಬಿಗ್ ಬಾಸ್ ಕನ್ನಡ 13ರ ಅಪ್ಡೇಟ್ ಗಳಿಗೆ ನಮ್ಮ ವೆಬ್ಸೈಟ್ ಗೆ ಭೇಟಿನೀಡಿ

https://bwriteskannada.com

Comments

No comments yet. Why don’t you start the discussion?

Leave a Reply

Your email address will not be published. Required fields are marked *