BBK 13 Contestants

BBK 13 Contestants

ಬಿಗ್ ಬಾಸ್ ಕನ್ನಡ 13ರ ಮನೆಗೆ ಎಂಟ್ರಿ ಕೊಡುವ ಸ್ಪರ್ಧಿಗಳು ಯಾರ್ಯಾರು

ಮನೋರಂಜನೆ, ಹಾಸ್ಯ, ಗಲಾಟೆ ಹಾಗೂ ವಿಭಿನ್ನ ಟಾಸ್ಕ್‌ಗಳನ್ನು ಒಳಗೊಂಡ ಕನ್ನಡಿಗರ ಅಚ್ಚುಮೆಚ್ಚಿನ ಕಾರ್ಯಕ್ರಮಗಳಲ್ಲಿ ಒಂದಾದ ಬಿಗ್ ಬಾಸ್ ಕನ್ನಡ ಸೀಸನ್ 13 ಇನ್ನೇನು ಕೆಲವೇ ಗಂಟೆಗಳಲ್ಲಿ ಆರಂಭವಾಗಲಿದೆ. ಕಳೆದ 12 ಸೀಸನ್‌ಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿರುವ ಕಿಚ್ಚ ಸುದೀಪ್ ಅವರೇ ಈ ಬಾರಿಯೂ BBK 13ರ ಸಾರಥಿಯಾಗಿ ಮುಂದುವರಿಯಲಿದ್ದಾರೆ. ಅದರಂತೆ, ಸೆಪ್ಟೆಂಬರ್ 6ರ ಸಂಜೆ 7 ಗಂಟೆಗೆ ಅದ್ಧೂರಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

ಈ ಬಾರಿ ಕೂಡ ವಿಭಿನ್ನ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಹಲವು ಪ್ರತಿಭೆಗಳು ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಲಿದ್ದಾರೆ. ಕಿರುತೆರೆಯಲ್ಲಿ ಮಿಂಚಿದ ಕಲಾವಿದರು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು, ಸಂಸ್ಕೃತಿಯ ಹಿನ್ನೆಲೆಯಿಂದ ಬಂದವರು ಹಾಗೂ ರಂಗಭೂಮಿ ಕಲಾವಿದರು ಸೇರಿದಂತೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವು ವ್ಯಕ್ತಿಗಳು ಈ ರಿಯಾಲಿಟಿ ಶೋನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಲಿದ್ದಾರೆ.

ಇದರ ನಡುವೆ, ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಲಿರುವ ಸ್ಪರ್ಧಿಗಳು ಯಾರು ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಿಶೇಷವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಹಲವು ಹೆಸರುಗಳು ಹರಿದಾಡುತ್ತಿದ್ದು, ಅವು ವೀಕ್ಷಕರ ಗಮನ ಸೆಳೆಯುತ್ತಿವೆ. ಹೀಗಾಗಿ, ಅಧಿಕೃತ ಘೋಷಣೆಗೂ ಮುನ್ನವೇ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಇದೀಗ ಕಾರ್ಯಕ್ರಮ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವುದರಿಂದ, ಈ ಕುತೂಹಲಕ್ಕೆ ಶೀಘ್ರದಲ್ಲೇ ತೆರೆ ಬೀಳಲಿದೆ. ಆದರೆ ಅದಕ್ಕೂ ಮುನ್ನ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಆಧಾರದ ಮೇಲೆ ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯೊಳಗೆ ಪ್ರವೇಶಿಸಬಹುದಾದ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಇಲ್ಲಿದೆ.

ಸ್ಪರ್ಧಿಗಳ ಪಟ್ಟಿ

1.ಅನನ್ಯ ಅಮರ್

2024 ರಲ್ಲಿ ಫ್ಯಾಮಿಲಿ ಡ್ರಾಮಾ ಎಂಬ ಕನ್ನಡ ಪ್ರಾದೇಶಿಕ ಹಾಸ್ಯ ಚಲನಚಿತ್ರದಿಂದ ಸಿನಿಲೋಕಕ್ಕೆ ಎಂಟ್ರಿ ಕೊಟ್ಟ ಇವರು ನಂತರದ ದಿನಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಿಚ್ಚಿ ಗಿಲಿಗಿಲಿ ಎಂಬ ಹಾಸ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಇದೆಲ್ಲದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕಂಟೆಟ್ ಕ್ರಿಯೇಟ್ ಮಾಡುವುದರ ಮೂಲಕ ಉತ್ತಮವಾದ ಹಿಂಬಾಲಕರನ್ನು ಗಳಿಸಿದ್ದಾರೆ

.ಇವರು ಕನ್ನಡದ ಸಿನಿ ನಟಿಯಾದ ಅಂಕಿತ ಅಮರ್ ಅವರ ತಂಗಿ.ಹಾಸ್ಯ ,ನೃತ್ಯ ,ನಟನೆಯಲ್ಲಿ ಗುರುತಿಸಿಕೊಂಡ ಇವರು ಈ ವರ್ಷ ಬಿಗ್ ಬಾಸ್ -13 ರ ಮನೆಗೆ ಪ್ರವೇಶಿಸುವ ಸ್ಪರ್ಧಿಗಳಲ್ಲಿ ಈ ಹೆಸರು ಪ್ರಭಲವಾಗಿ ಕೇಳಿ ಬರುತ್ತಿದೆ.

2.ಗಾನವಿ ಗೌಡ

ಸಾಮಾಜಿಕ ಜಾಲತಾಣಗಳಲ್ಲಿ ಕಂಟೆಂಟ್ ಕ್ರಿಯೇಯೇಟರ್ ಮತ್ತು ಇನ್ಫ್ಲುಯೆನ್ಸರ್ ಆದ ಗಾನವಿ ಗೌಡ ನಿರಂತರವಾಗಿ ಕಂಟೆಂಟ್ ಕ್ರಿಯೇಟ್ ಮಾಡುವುದರ ಮೂಲಕ ಹೆಸರುಗಳಿಸಿದ್ದಾರೆ. ಹಾಗೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಜಿ ಪವರ್ ಮನೋರಂಜನೇಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅದರಲ್ಲಿ ಮೊದಲನೆಯ ರನ್ನರ್ ಆಗಿ ಆಯ್ಕೆ ಆಗಿ ವ್ಯಾಪಕ ಮನ್ನಣೆಯನ್ನು ಗಳಿಸಿದ್ದಾರೆ. ಈ ವರ್ಷ ಬಿಗ್ ಬಾಸ್ -13ರ ಮನೆಗೆ ಎಂಟ್ರಿ ಕೊಡುವ ಸ್ಪರ್ಧಿಗಳ ಸಂಭಾವ್ಯ ಪಟ್ಟಿಯಲ್ಲಿ ಇವರ ಹೆಸರು ಸಹ ಕೇಳಿ ಬರುತ್ತದೆ.

3.ಸುಷ್ಮಾ ರಾವ್

ಕನ್ನಡದ ಖ್ಯಾತ ಕಿರುತೆರೆಯ ನಟಿಯಾದ ಸುಷ್ಮಾ ರಾವ್ ಸುಮಾರು 2000s ರಿಂದ ಕನ್ನಡ ಕಿರುತೆರೆಯಲ್ಲಿ ನಟಿಸಿ ಮನೆಮಾತಾಗಿದ್ದಾರೆ. ಭಾಗೀರಥಿ ಎಂಬ ಸೀರಿಯಲ್ ಮೂಲಕ ಕನ್ನಡದ ಕಿರುತೆರೆಯ ಪ್ರಪಂಚಕ್ಕೆ ಕಾಲಿಟ್ಟ ಇವರು ನಂತರ ಗುಪ್ತಗಾಮಿನಿ ಸೊಸೆ ತಂದ ಸೌಭಾಗ್ಯ ಎಂಬ ಸೀರಿಯಲ್ ಗಳಲ್ಲಿ ನಟಿಸಿ ಒಳ್ಳೆಯ ಹೆಸರು ಮಾಡಿದ್ದಾರೆ.ವೃತ್ತಿಪರ ಭರತನಾಟ್ಯಂ ಕಲಾವಿದರಾದ ಇವರು ಹತ್ತು ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ.ಮನೆ ಮನೆ ಮಹಾಲಕ್ಷ್ಮಿ ಎಂಬ ಕಾರ್ಯಕ್ರಮದಲ್ಲಿ ನಿರೂಪಣೆಯನ್ನು ಮಾಡಿ ಜನರಿಂದ ಸೈ ಎನಿಸಿಕೊಂಡಿದ್ದಾರೆ.ಬಿಗ್ ಬಾಸ್ -13 ರಲ್ಲಿ ಮನೆ ಪ್ರವೇಶಿಸುವ ಸ್ಪರ್ಧೆಗಳಲ್ಲಿ ಇವರು ಸಹ ಕೇಳಿ ಬರುತ್ತಿದೆ.

4.ಪೃಥ್ವಿ ಅಂಬರ್

ಪೃಥ್ವಿ ಅಂಬರ್ ಸಹ ಬಿಗ್ ಬಾಸ್ 13ರ ಮನೆ ಪ್ರವೇಶಿಸಲು ಸಜ್ಜಾಗಿದ್ದಾರೆ ಮೊದಲು ರೇಡಿಯೋ ಜಾಕಿಯಾಗಿ ಗುರುತಿಸಿಕೊಂಡ ಇವರು ತಮ್ಮ ಒಲವನ್ನು ನಟನೆಯ ಕಡೆಗೆ ಬದಲಿಸಿದ್ದಾರೆ. ಮೊದಲಿಗೆ ಕನ್ನಡ ಹಾಗು ತುಳು ಚಿತ್ರದಲ್ಲಿ ನಟಿಸಿದ ಇವರು ದಿಯಾ ಚಿತ್ರದ ಮೂಲಕ ಹಲವು ರಾಜ್ಯದ ಸಿನಿಮಾ ರಂಗಕ್ಕೆ ಪರಿಚಯವಾದರು . ನಂತರ ಶುಗರ್ ಫ್ಯಾಕ್ಟರಿ,ದೂರದರ್ಶನ,ಜೂನಿ ಹಾಗೂ ಭುವನಂ ಗಗನಂ ಎಂಬ ಚಿತ್ರಗಳ ಮೂಲಕ ಜನರ ವ್ಯಾಪಕ ಮನ್ನಣೆ ಗಳಿಸಿದ್ದಾರೆ. ಅವರ ಸಹಜ ನಟನೆ ಮತ್ತು ಬಹುಮುಖ ಪ್ರತಿಭೆಯಿಂದ ಬಿಗ್ ಬಾಸ್ -13 ರ ಮನೆಗೆ ಟಿಕೆಟ್ ಪಡೆಯುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.

https://en.wikipedia.org/wiki/Pruthvi_Ambaar

5.ಡ್ರ್ಯಾಗನ್ ಮಂಜ

ಕನ್ನಡದ ಪ್ರಾದೇಶಿಕ ಚಿತ್ರಗಳಲ್ಲಿ ಖಳನಟ ನಾಯಕನಾಗಿ ಮಿಂಚಿದ ಡ್ರ್ಯಾಗನ್ ಮಂಜು ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶಿಸುತ್ತಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಭೀಮ ಮತ್ತು ಬ್ರಾಟ್ ಚಿತ್ರಗಳಲ್ಲಿ ನಟಿಸಿದ ಇವರು ಖಳನಟನಾಗಿ ಹೆಚ್ಚು ಪ್ರಶಂಸೆ ಗಳಿಸಿದ್ದಾರೆ. ಇವರ ಲುಕ್ಸ್ ಸಾಮಾನ್ಯ ಸ್ಪರ್ಧಿಗಳಿಗೆ ಹೆಚ್ಚು ಖಾರವಾಗಿ ಕಾಣಿಸಬಹುದು. ಇದರಿಂದ ಈ ಬಾರಿಯ ಬಿಗ್ ಬಾಸ್ ಮತ್ತಷ್ಟು ಜಗಳ ಮತ್ತು ಕಾಳಗ ಗಳಿಗೆ ಕಾರಣವಾಗಬಹುದು.

6.ಅಸಿಯಾ ಫಿರ್ದೋಸ್

ಕನ್ನಡದ ಖ್ಯಾತ ಕಿರುತೆರೆ ನಟಿಯಾದ ಅಸಿಯಾ ಫಿರ್ದೋಸ್ ಅವರು ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ ಎಂಬ ಸದ್ದಿ ಕೇಳಿಬರುತ್ತದೆ. ಕನ್ನಡದ ಕಿರುತೆರೆಯ ಧಾರವಾಹಿಗಳಾದ ಶ್ರಾವಣಿ ಸುಬ್ರಮಣ್ಯ ಹಾಗೂ ಕನ್ಯಾಕುಮಾರಿ ಧಾರವಾಹಿಗಳಲ್ಲಿ ನಟನೆ ಮಾಡಿ ತಮ್ಮ ಚಾಪನ್ನು ಮೂಡಿಸಿದ್ದಾರೆ. ಕನ್ಯಾಕುಮಾರಿಯ ಕನ್ನಿಕಾ ಪಾತ್ರ ಜನಮೆಚ್ಚುಗೆಯಿಂದ ಶ್ರಾವಣಿ ಸುಬ್ರಹ್ಮಣ್ಯ ಧಾರವಾಹಿಯಲ್ಲಿ ನಾಯಕಿಯಾಗಿ ಆಯ್ಕೆಯಾದರು. ಅವರ ನಟನೆ ಮತ್ತು ಆಕರ್ಷಕ ಲುಕ್ಸ್ ನಿಂದ ಅಪಾರವಾದ ಜನರ ಪ್ರೀತಿಯನ್ನು ಗಳಿಸುವ ಮೂಲಕ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ.

7.ರಚೆಲ್ ಡೇವಿಡ್

ಲವ್ ಮೊಕ್ಟೈಲ್ 2 ಮುಖಾಂತರ ಕನ್ನಡ ಸಿನಿರಂಗಕ್ಕೆ ಪ್ರವೇಶಿಸಿದರು.ಆ ಚಿತ್ರದಲ್ಲಿನ ಸಿಹಿ ಪಾತ್ರಕ್ಕೆ ಜನ ಫುಲ್ ಮಾಡಿಸಿ ಕೊಟ್ಟಿದ್ದರು. ನಂತರ ಚೆಫ್ ಚಿದಂಬರ, ಅನ್ಲಾಕ್ ರಾಘವ ಮತ್ತು ಭುವನಂ ಗಗನಂ ಎಂಬ ಸಿನೆಮಾಗಳಲ್ಲಿ ನಟಿಸಿದ್ದಾರೆ. ಮೂಲತಃ ಮಲಿಯಾಳಿ ಆದ ಇವರು, ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲೇ.2019 ರಲ್ಲಿ ಬಿಡುಗಡೆಯಾದ ಇರುಪತಿಯೊಂನಾಮ್ ನೂತತಾಂದು ಚಿತ್ರದಿಂದ ಸಿನಿಗಂಗಕ್ಕೆ ಎಂಟ್ರಿಕೊಟ್ಟಿದ್ದರು.ಬಿಗ್ ಬಾಸ್ -13ರಲ್ಲಿ ಮನೆ ಪ್ರವೇಶಿಸುವ ಸ್ಪರ್ಧೆಗಳಲ್ಲಿ ಇವರು ಸಹ ಕೇಳಿ ಬರುತ್ತಿದೆ.

8.ತಾಂಡವ್ ರಾಮ್

ಕನ್ನಡದ ಧಾರವಾಹಿ ನೋಡುಗಳಿಗೆ ತಾಂಡವ್ ರಾಮ್ ನ ಪರಿಚಯದ ಅಗತ್ಯವಿಲ್ಲ. ಮೂಲತಃ ಹಾಸನ ಜಿಲ್ಲೆಯಾದ ಇವರು ನಟನೆ ಹಾಗೂ ರಂಗಭೂಮಿ ಕಲಾವಿದರು. ಮೊದಲಿಗೆ ಕೃಷ್ಣ ರುಕ್ಮಿಣಿ, ಬಾಳ ಅಪರೂಪ ನಮ್ ಜೋಡಿ ಎಂಬ ಧಾರವಾಹಿಗಳಲ್ಲಿ ನಟಿಸಿದ್ದಾರೂ ಅವರು ಹೆಸರು ಅಷ್ಟು ಚಿರಪರಿಚಿತವಾಗಲಿಲ್ಲ. ನಂತರ ನಟಿಸಿದ ಜೋಡಿಹಕ್ಕಿಯಲ್ಲಿನ ರಮಣ ಪಾತ್ರ ಕರ್ನಾಟಕದ ಮನೆ ಮಾತಾಗಿ ಕನ್ನಡ ಸೀನಿರಂಗಕ್ಕೆ ಕಾಲಿಟ್ಟರು. ಇವರು ಈಗಾಗಲೇ ಒಂದ್ ಕಥೆ ಹೇಳ್ಳಾ, ಮರೆಯಲಾರೆ, ಅಬ್ಬಬ್ಬಾ ಎಂಬ ಚಿತ್ರಗಳಲ್ಲಿ ನಟಿಸಿ ಉದಯೋನ್ಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ.

9.ಸೂರಜ್ ಕುಮಾರ್

ಕಾಮಿಡಿ ಕೋಟಾದಲ್ಲಿ ಸೂರಜ್ ಕುಮಾರ್ ಬಿಗ್ ಬಾಸ್ ಮನೆ ಪ್ರವೇಶ ಮಾಡಲು ತಯಾರಿ ನಡಿಸಿದ್ದಾರೆಂಬ ಸುದ್ದಿ ಕೇಳಿಬರುತ್ತಿದೆ. ಇವರು ಕಾಮಿಡಿ ಕಿಲಾಡಿಗರು ಎಂಬ ಪ್ರಸಿದ್ಧ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕನ್ನಡ ಜನತೆಯನ್ನು ನಕ್ಕು ನಗಿಸಿದ್ದಾರೆ.ಕರುನಾಡ ಜನರನ್ನು ರಂಜಿಸಿದ ಅನುಭವವಿರುವ ಇವರು ಬಿಗ್ ಬಾಸ್ ಮನೆಯ ಡ್ರಾಮಾ ಹಾಗೂ ಹಾಸ್ಯ ಮಾಡುವುದರಲ್ಲಿ ಪ್ರಮುಖ ಪಾತ್ರವಹಿಸಬಹುದು.

10.ಸೌಂದರ್ಯ ಶೆಟ್ಟಿ

ಮೂಲತಃ ಮಂಗಳೂರಿನ ಮಾಡೆಲ್ ಆದ ಇವರು ಕಂಟೆಂಟ್ ಕ್ರಿಯೇಟರ್ ಹಾಗೂ ರಿಯಾಲಿಟಿ ಶೋ ನ ಸ್ಪರ್ಧಿ ಯಾಗಿದ್ದಾರೆ.MTV splitsvilla 16: Pyaar Ya Paisa ರಿಯಾಲಿಟಿ ಡೇಟಿಂಗ್ ಶೋ ನಲ್ಲಿ ಭಾಗವಹಿಸಿ ಫೈನಲಿಸ್ಟ್ ಆಗಿದ್ದರು. ಇವರ ಆಟದ ತಂತ್ರಗಾರಿಕೆ ಬಗ್ಗೆ ಹೆಚ್ಚು ಚರ್ಚೆಗೆ ಕಾರಣವಾಗಿತ್ತು. MTV Roadies ಎಂಬ ಕಾರ್ಯಕ್ರಮಕ್ಕು ಆಡಿಷನ್ ನೀಡಿದ್ದರು. ಹೆಸರಿಗೆ ತಕ್ಕಂತೆ ಸೌಂದರ್ಯವತಿಯಾದ ಇವರು ಮಾಡೇಲಿಂಗ್ ಹಾಗೂ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ 2019 ರಲ್ಲಿ Miss World Teen Supermodel ಪ್ರಶಸ್ತಿಯನ್ನು ಗೆದ್ದಿದ್ದಾರೆ.ಬಿಗ್ ಬಾಸ್ -13ರ ಮನೆಗೆ ಪವೇಶಿಸುತ್ತಾರೆ ಎಂಬ ವರದಿಗಳು ಬರುತ್ತಿವೆ ಒಂದು ವೇಳೆ ಪ್ರವೇಶಿಸಿದರೆ ಧೈರ್ಯಶಾಲಿ ವ್ಯಕ್ತಿತ್ವ, ಸ್ಪಷ್ಟವಾದ ಮಾತು ಇತರರ ಜೊತೆಗೆ ಮಾತಿನ ಚಕಮಕಿಗೆ ಕಾರಣವಾಗಬಹುದು.

11.ಗಗನ ಬರಿ

ಗಗನ ಬರಿ ಯಾವಾಗಲು ಗಿಲ್ಲಿ ಜೊತೆಗಿನ ವಿವಾದ ಚರ್ಚೆಗಳಿಗೆ ಕಾರಣವಾಗುತಿದ್ದ ಇವರು ಮೂಲತಃ ಕೋಟೆನಾಡಿನ ಚಿತ್ರದುರ್ಗದವರು.ತಮ್ಮ ನಟನೆಯ ಮೂಲಕ ಕನ್ನಡಿಗರ ಜನಮನ ಗೆದ್ದಿರುವ ಇವರು ಜೀ ಕನ್ನಡ ವಾಹಿನಿ ನಡೆಸಿದ ಮಾಹಾನಟಿ ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು.ಇವರ ಮುಖ ಕನ್ನಡಿಗರ ಮನೆ ಮನಗಳಿಗೆ ಚಿರಪರಿಚಯರಾಗಿದ್ದರಿಂದ ಬಿಗ್ ಬಾಸ್ ಮನೆಯಲ್ಲಿ ಇವರ ಪಾತ್ರವು ಸಹ ಬಹುಮುಖ್ಯವಾಗಲಿದೆ.

12.ಭರತ್ ಬೋಪಣ್ಣ

ಭರತ್ ಬೋಪಣ್ಣ 2016 ರಲ್ಲಿ ಪ್ರಸಾರಗೊಂಡ ಪೌರಾಣಿಕ ಧಾರಾವಾಹಿಯಾದಂತಹ ಗಿರಿಜಾ ಕಲ್ಯಾಣ ಮೂಲಕ ಕಿರುತೆರೆಗೆ ಪ್ರವೇಶಿಸಿದರು.ನಂತರ ಬ್ರಹ್ಮಗಂಟು ಧಾರಾವಾಹಿಯ ಲಕ್ಕಿ ಎಂಬ ಕಬಡ್ಡಿ ಚಾಂಪಿಯನ್ ಪಾತ್ರ ರಾಜ್ಯದ ಮೂಲೆಮೂಲೆಗೆ ಇವರ ಹೆಸರು ಪರಿಚಯವಾಗುವಂತೆ ಮಾಡಿತು.2020ರಲ್ಲಿ ಡೆಮೋ ಪೀಸ್ ನಲ್ಲಿ ನಟಿಸುವ ಮುಖಾಂತರ ಕನ್ನಡ ಸಿನಿ ರಂಗಕ್ಕೆ ಪ್ರವೇಶ ಮಾಡಿದರು. ನಂತರ ಆನಂದ್ ಸಂಕೇಶ್ವರ ಅವರ ಜೀವನಾಧಾರಿತ ಚಿತ್ರದಲ್ಲಿ ನಾಯಕನಾಗಿ ನಟಿಸಿ ಅಪಾರ ಜನಮನ್ನಣೆಯನ್ನು ಗಳಿಸಿದರು.ಸಿನಿಮಾ ಹಾಗು ಧಾರಾವಾಹಿಯಲ್ಲಿನ ಇವರ ಅನುಭವ ಬಿಗ್ಬೋಸ್ ಮನೆಗೆ ಹೇಗೆ ಸಹಕಾರಿಯಾಗುತ್ತದೆ ಎಂದು ಕಾಡು ನೋಡಬೇಕಿದೆ.

13.ಸುನಿಲ್ ರಾವ್

ಸುನಿಲ್ ರಾವ್ ಹೆಸರು ಕಳೆದ ಬಿಗ್ ಬಾಸ್ ನಲ್ಲೆ ಇವರು ಹೆಸರು ಕೇಳಿಬರುತ್ತಿತ್ತು ಆದರೆ ಆದರೆ ಅದು ನಿಜವಾಗಿರಲಿಲ್ಲ .ಈ ವರ್ಷವಾದರೂ ದೊಡ್ಮನೆಗೆ ಎಂಟ್ರಿ ಕೊಡಲಿದೆಯೇ ಎಂಬುದನ್ನು ಕಾಡು ನೋಡಬೇಕಿದೆ.1987 ರಲ್ಲಿ ಬಾಲನಟನಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಇವರು ಮೂಲತಃ ಸಂಗೀತ ಕುಟುಂಬದ ಹಿನ್ನೆಲೆ ಉಳ್ಳವರು.ಇವರು ಹಿನ್ನೆಲೆ ಗಾಯಕರಾದ ಬಿ.ಕೆ ಸುಮಿತ್ರಾ ಮಗ ಹಾಗು ಸೌಮ್ಯ ರಾವ್ ಅವರ ಸಹೋದರ.ಕೆಂಡದ ಮಳೆ, ಏಳು ಸುತ್ತಿನ ಕೋಟೆ, ರೆಡಿಮೇಡ್ ಗಂಡ, ಶಾಂತಿ ಕ್ರಾಂತಿ, ಮೈಸೂರು ಜಾಣ ಚಿತ್ರ, ಪಂಚಾಳಿ, ಪ್ರೀತಿ ಪ್ರೇಮ ಪ್ರಣಯ, ಎಕ್ಸ್‌ಕ್ಯೂಸ್ ಮೀ, ಬಾ ಬಾರೋ ರಸಿಕ, ಚಪ್ಪಾಳೆ, ಮಸಾಲಾ, ಸಖ ಸಖಿ, ಬೆಳ್ಳಿ ಬೆಟ್ಟ, ಜಾಕ್‌ಪಾಟ್, ಮಿನುಗು, ಪ್ರೇಮಿಸಂ, ತುರ್ತು ನಿರ್ಗಮನ, ಓಲ್ಡ್ ಮಾಂಕ್, ಮರ್ಯಾದೆ ಹೀಗೆ ಹತ್ತು ಹಲವಾರು ಚಲನಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

14.ತಪಸ್ವಿನಿ ಪೂಣಚ್ಚ

ಕೊಡಗಿನ ಕುವರಿ ತಪಸ್ವಿನಿ ಪೂಣಚ್ಛರವರು ಮೂಲತಃ ಕೊಡಗಿನ ವೀರಾಜಪೇಟೆಯವರು.ರಿಷಬ್ ಶೆಟ್ಟಿ ಅಭಿನಯದ ಹರಿ ಕತೆ ಅಲ್ಲ ಗಿರಿಕಥೆ ಸಿನಿಮಾ ಮುಖಾಂತರ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಇವರು ನಂತರದ ದಿನಗಳಲ್ಲಿ ಗಜರಾಮ ಸಿನಿಮಾದಲ್ಲಿ ನಟಿಸಿದ್ದಾರೆ.ಬಹುಮುಖ ಪ್ರತಿಭೆಯಾದ ಇವರು ಚಿತ್ತಾರ ಕೊಡುವ ಉದಯೋನ್ಮುಖ ನಟಿ ಎಂಬ ಪ್ರಶಸ್ತಿಗೆ ಭಾಜಿನರಾಗಿದ್ದಾರೆ.ಇನ್ನು ಸಾಲು ಸಾಲು ಕನ್ನಡ ಚಲಚಿತ್ರಗಳಲ್ಲಿ ನಟಿಸಲು ಅವಕಾಶ ಪಡೆದಿರುವ ಇವರು ದೊಡ್ಮನೆಗೆ ಪರೀಕ್ಷೆಗೆ ಹಾಜರಾಗುತ್ತಾರೆ ಎಂಬ ಬಲವಾದ ವರದಿ ಇದೆ.

15.ಅಮೋಘ್ ಆದಿತ್ಯ

ಅಮೋಘ್ ಆದಿತ್ಯ ಕನ್ನಡ ಕಿರುತೆರೆಯ ಪ್ರತಿಭಾವಂತ ನಟ. ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿನ ನಾಯಕನ ಪಾತ್ರಕ್ಕೆ ಅಪಾರವಾದ ಜನಮನ್ನಣೆ ಗಳಿಸಿದ್ದಾರೆ.ಇಷ್ಟು ದಿನ ಧಾರವಾಹಿ ಪ್ರೇಕ್ಷಕರ ಗಮನ ಸೆಳೆದಿದ್ದ ಇವರು ಈಗ ಕರುನಾಡ ಜನತೆಗೆ ಮನೋರಂಜನೆ ನೀಡಲು ಬರುತ್ತಾರೆ ಎಂಬ ಸುದ್ದಿ ಇದೆ.ಬಿಗ್ ಬಾಸ್ ಇವರ ಸಿನಿ ವೃತ್ತಿ ಜೀವನವನ್ನು ಸಧೃಡವಾಗಿ ಮುನ್ನೆಡಸಲು ಸಹಕಾರಿಯಾಗಲಿದೆ.

ಇನ್ನು ಸಂಭಾವ್ಯ ಪಟ್ಟಿಯಲ್ಲಿ ಕನ್ನಡ ಕಿರುತೆರೆ ಹಾಗು ಹಿರಿತೆರೆಯ ನಟಿಯಾದ ಸಂಗೀತ ಭಟ್ ,ಭಾಗ್ಯಲಕ್ಷ್ಮಿ ಧಾರಾವಾಹಿಯ ನಟಿಯಾದ ಕಾವ್ಯ ಗೌಡ,ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಖ್ಯಾತಿಯ ಅಥರ್ವ್, ಪ್ಯಾಟೆ ಹುಡ್ಗಿರ್ ಹಳ್ಳಿ ಲೈಫ್ ಖ್ಯಾತಿಯ ಆಸಿಯಾ ಬೇಗಮ್, ಉದ್ಯಮಿ ಹಾಗು ನಿರ್ಮಾಪಕರು ಆದಂತಹ ಅರವಿಂದ್ ವೆಂಕಟೇಶ್ ರೆಡ್ಡಿ ,ಅಣ್ಣಯ್ಯ ಸೀರಿಯಲ್ ಖ್ಯಾತಿಯ ಸುಶ್ಮಿತ್ ಜೈನ್,ನಂದಗೋಕುಲ ಸೀರಿಯಲ್ ನ ನಟ ಯಶವಂತ್ , ಲವ್ mocktail 3 ಖ್ಯಾತಿಯ ಜಗ್ಗ ಮಮ್ಮಿ ಬ್ರಹ್ಮಗಂಟು ಖ್ಯಾತಿಯ ದಿಯಾ ಪಲಕ್ಕಲ್ ಸಹ ದೊಡ್ಮನೆಗೆ ಬರುವ ಸ್ಪರ್ಧಿಗಳ ಸಂಭಾವ್ಯ ಪಟ್ಟಿಯಲ್ಲಿ ಇವರ ಹೆಸರುಗಳಿವೆ.ಇವರುಗಳ ಜೊತೆಗೆ ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ಭಾಗಿಯಾದ ಕಿರಣ್ ಶಾಸ್ತ್ರಿ ,ಲಿಖಿತ್ ಗೊಂಡಿ ,ಧನುಷ್ ಮಂಜುನಾಥ್ ಸಹ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಾರೆಯೆಂಬ ಸುದ್ದಿ ಹರಿದಾಡುತ್ತಿದೆ.

ಈ ಪಟ್ಟಿಯಲ್ಲಿ ಯಾರು ಬಂದರು ಸಹ ಇನ್ನು 100 ದಿನಗಳ ಕಾಲ ಕನ್ನಡ ಜನತೆಗೆ ಮನೋರಂಜನೆ ಕಟ್ಟಿಟ್ಟ ಬುತ್ತಿ.ಈ ಬಾರಿ ಬಿಗ್ ಬಾಸ್ ಮನೆಯ ಥೀಮ್ ಏರೋಪ್ಲೇನ್ ಆಗಿದ್ದು ಅದರ ಕಾಕ್ಪಿಟ್ ನಲ್ಲಿ ಕೂತು ಮುನ್ನಡೆಸುವ ಜವಾಬ್ದಾರಿಯನ್ನು ಕ್ಯಾಪ್ಟನ್ ಕಿಚ್ಚ ಸುದೀಪ್ ಅವರದ್ದು.ಈ ಸ್ಪರ್ಧಿಗಳನ್ನು ಹೇಗೆ ಅವರು ಸಂಭಾಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ

ಬಿಗ್ ಬಾಸ್ ಕನ್ನಡ 13ರ ಅಪ್ಡೇಟ್ ಗಳಿಗೆ ನಮ್ಮ ವೆಬ್ಸೈಟ್ ಗೆ ಭೇಟಿನೀಡಿ

https://bwriteskannada.com

Comments

No comments yet. Why don’t you start the discussion?

Leave a Reply

Your email address will not be published. Required fields are marked *