ಸ್ನೇಹ ಚಿರಾಯು-6

ಸ್ನೇಹ ಚಿರಾಯು-6

ಸ್ನೇಹ ಚಿರಾಯು – ತುಳಸಿ ಎಲ್ಲರನ್ನು ಟ್ರೀಟ್ಮೆಂಟ್ ರೂಮಿಗೆ ಕರೆದುಕೊಂಡು ಹೋದಾಗ ಒಮ್ಮೆ ಭಯಭೀತರಾದರು. ಏಕೆಂದರೆ ಅಲ್ಲಿದ್ದಿದ್ದು ಬೇರೆ ಯಾರು ಅಲ್ಲ ಚಿರಂತ್…

ಚಿರಂತನನ್ನು ನೋಡಿ ಒಮ್ಮೆಲೇ ಕುಸಿದು ಬಿದ್ದಳು ಮೀರಾ.ಏಕೆಂದು ತುಳಸಿ ಕೇಳಿದಾಗ ತಿಳಿಯಿತು ಅವನು ಮೀರಾಳ ಸ್ನೇಹಿತನೆಂದು.

‌ಮಾನ್ಯ ಮೀರಾಳನ್ನು ಸಮಾಧಾನ ಮಾಡುವ ಸಲುವಾಗಿ ಹೊರಗೆ ಕರೆ ತಂದಳು. ಮೀರಾ ಕಣ್ಣಂಚಲ್ಲಿ ನೀರು ಧಾರಾಕಾರವಾಗಿ ಹರಿದು ಕೆನ್ನೆಗೆ ಸೋಕಿದ್ದವು.

“ಅವ್ನ್ ಅಂದ್ರೆ ಅಷ್ಟ್ ಸಿಟ್ಟು ಇರೋಳು ಈಗ  ಯಾಕಮ್ಮ ಅಳ್ತಿದೀಯಾ”ಎಂದು ವ್ಯಂಗ್ಯ ಮಾಡಿದಳು ಮಾನ್ಯ.

“ಅವ್ನ್ ಮೇಲೆ ಎಷ್ಟೇ ಸಿಟ್ಟಿದ್ರು ಅವನಿಗೇನಾದ್ರು ಆದ್ರೆ ತಡ್ಕೊಳ್ಳೋ ಶಕ್ತಿ ನಂಗಿಲ್ಲ ಮಾನ್ಯ”ಎಂದಳು ಅಳುತ್ತಲೇ.

ಅಲ್ಲಿಗೆ ಬಂದ ಸ್ನೇಹಿತರೆಲ್ಲರೂ ಅವಳನ್ನು ಸಮಾಧಾನ ಮಾಡಲು ಪ್ರಯತ್ನಿಸಿದರೂ ಅದು ಅವರಿಂದ ಸಾಧ್ಯವಾಗಲಿಲ್ಲ.

ಅಷ್ಟರಲ್ಲಿ ಅಲ್ಲಿಗೆ ಬಂದ ತುಳಸಿ “ನೋಡು ಮೀರಾ ಆ ಹುಡುಗ ಯಾರು ಅಂತ ಗೊತ್ತಿಲ್ದೆ ಇರುವಾಗಲೇ ಅವ್ನು ನನ್ನ ಪ್ರಾಣ ಕಾಪಾಡಿದ ಅಂತ ತುಂಬಾ ಕೇರ್ ತಗೊಂಡೆ. ಈಗ ನಿನ್ನ ಸ್ನೇಹಿತ ಅಂತ ಗೊತ್ತಾದಮೇಲೆ ಚೆನ್ನಾಗಿ ನೋಡ್ಕೊಳ್ದೆ ಇರುತ್ತೀನಾ.ನೀನೇನ್ ಗಾಬರಿಯಾಗ್ಬೇಡ ಅವನ ಪೂರ್ತಿ ಜವಾಬ್ದಾರಿ ನಂದು”ಎಂದು ಸಮಾಧಾನ ಮಾಡಲು ಪ್ರಯತ್ನಿಸಿದರು.

“ಹಾಗಲ್ಲ ಆಂಟಿ ಚಿಕ್ಕಂದಿನಿಂದಲೂ ಅವನನ್ನು ಈ ಪರಿಸ್ಥಿತಿಯನ್ನು ಎಂದು ನೋಡಿರಲಿಲ್ಲ. ಈಗ  ಸಡನ್ ಆಗಿ ನೋಡಿದ್ರಿಂದ ಅಳು ತಡಿಯೋಕಾಗ್ಲಿಲ್ಲ ಅಷ್ಟೇ”ಎಂದಳು ಮೀರಾ ಕಣ್ಣೊರೆಸಿಕೊಳ್ಳುತ್ತಾ.

“ಸರಿ ಮೀರಾ ನೀವ್ ಹೋಗಿ ಆಮೇಲೆ ಪಿಜಿ ಮುಚ್ಚಿದರೆ ಕಷ್ಟ”ಎಂದರು ತುಳಸಿ.

“ಆಂಟಿ ಇನ್ನೊಂದ್ ಸರಿ ಚಿರುನ ನೋಡ್ಕೊಂಡ್ ಹೋಗ್ಬೋದಾ..?”ಎಂದು ಪ್ರಶ್ನೆಮಾಡಿದಳು ಮೀರಾ.

“ಸರಿ ಮೀರಾ ನೀವ್ ನೋಡ್ಕೊಂಡು ಹೋಗಿ ನಂಗ್ ಕೆಲಸ ಇದೆ ನಾನ್ ಹೋಗ್ಬೇಕು.ಪುಟ್ಟ ನೀನ್ ಚಿರುನ ನೋಡ್ಕೊಂಡು ಇಲ್ಲೇ ಇರು ನಾನ್ ಬೇಗ ಬರ್ತೀನಿ”ಎಂದು ನಿಧಿಗೆ ಹೇಳಿ ತುಳಸಿ ಅಲ್ಲಿಂದ ಹೊರಟರು.

ಮೀರಾ ಚಿರುನ ನೋಡಿಕೊಂಡು ಭಾರವಾದ ಮನಸ್ಸಿಂದಲೇ ಪಿಜಿಗೆ ಹೋದಳು.ಪಿಜಿಗೆ ಬಂದ ತಕ್ಷಣ ಫೋನ್ ಮಾಡಿದ್ದ ಪ್ರಕಾಶ್ “ಮೀರಾ ಚಿರು ಇನ್ನು ಮನೆಗೆ ಬಂದಿಲ್ಲ.ಅಲ್ಲೇ ಇದಾನ ಇನ್ನು”ಎಂದು ಕೇಳಿದರು ಗಾಬರಿಯಿಂದ.

“ಹ್ಮ್ ಅಂಕಲ್ ಇಲ್ಲೇ ನನ್ ಜೊತೆಯಲ್ಲೇ ಇದ್ದಾನೆ.ಇನ್ನೊಂದೆರಡು ದಿನ ಇಲ್ಲೇ ನನ್ ಜೊತೆ ನನ್ ಫ್ರೆಂಡ್ಸ್ ಜೊತೆ ಇದ್ದು ಬರುತ್ತಾನಂತೆ  ನೀವೇನ್ ಗಾಬರಿಮಾಡಿಕೊಳ್ಳಬೇಡಿ ಹುಷಾರಾಗಿರಿ”ಎಂದು ಬೇಜಾರಿಂದಲೇ ಪ್ರಕಾಶ್ ಉತ್ತರಕ್ಕೂ ಕಾಯದೆ ಫೋನ್ ಕಟ್ ಮಾಡಿಟ್ಟಳು ಮೀರಾ.

ಮೀರಾಳ ಮಾತುಗಳನ್ನು ಕೇಳಿದ ಪ್ರಕಾಶ್ ‘ಮೀರಾ ಚಿರಂತನನ್ನು ಮಾತಾಡಿಸುತ್ತುರಲಿಲ್ಲವಲ್ಲ’ ಎಂಬ ಅನುಮಾನ ಬಂದರೂ ಇಬ್ಬರು ಮೊದಲಿನ ತರ ಮಾತಾಡಿಸಿದ್ರೆ ಸಾಕು ಎಂದು ಮನದಲ್ಲೇ ಅಂದುಕೊಂಡು ಸುಮ್ಮನಾದರು.

ತಾಯಿಯ ಮಾತಿನಂತೆ ಚಿರಂತ್ ಬಳಿ ಕೂತಿದ್ದ ನಿಧಿ ಅವನನ್ನು ದಿಟ್ಟಿಸಿ ನೋಡುತಿದ್ದಳು.ಅವನ ಮೇಲೆ ಅದೊಂದು ಸುಂದರ ಭಾವನೆ ಮೂಡತೊಡಗಿತ್ತು.

ಚಿರಂತ್ ಎಚ್ಚರಗೊಂಡ ತಕ್ಷಣ ಕಣ್ಣಿಗೆ ಕಂಡ ನಿಧಿಯನ್ನು ನೋಡಿ “ಯಾರ್ ನೀವು ನಾನೆಲ್ಲಿದ್ದೇನೆ”ಎಂದು ಪ್ರಶ್ನೆ ಮಾಡಿದ.

“ಮಧ್ಯಾಹ್ನ ನೀವ್ ಒಬ್ಬರನ್ನು ಕಾಪಾಡಿದ್ರಲ್ವಾ ನಾನ್ ಅವ್ರ ಮಗಳು ನಿಧಿ ಅಂತ.ಸದ್ಯಕ್ಕೆ ನೀವು ನಮ್ಮ ಆಸ್ಪತ್ರೆಯಲ್ಲಿದ್ದೀರಿ”ಎಂದಳು ನಿಧಿ.

“ನಾನ್ ಯಾರನ್ನ ಯಾರಿಂದ ಕಾಪಾಡಿದೆ.ಏನ್ ಮಾತಾಡ್ತಿದೀರಾ ನಂಗೇನು ಅರ್ಥ ಆಗ್ತಿಲ್ಲ”ಎಂದ ಚಿರಂತ್ ಗೊಂದಲದಿಂದ.

“ಹಾ…s ಇದೇನ್ರಿ ಹೀಗ್ ಕೆಳ್ತಿದೀರಾ ಏನು ನೆನಪಿಲ್ವಾ ನಿಮಗೆ”ಎಂದು ಆಶ್ಚರ್ಯದಿಂದ ಕೇಳಿದಳು. ಹಾಗೇ ಮಾತನ್ನು ಮುಂದುವರೆಸಿ  “ನಾನ್ ಅವ್ರ್ ಮಗಳಷ್ಟೇ ಅಲ್ಲ ನಿಮ್ ಫ್ರೆಂಡ್ ಮೀರಾಳ ಕ್ಲೋಸ್ ಫ್ರೆಂಡ್”ಎಂದು ತನ್ನನ್ನು ತಾನು ಪರಿಚಯ ಮಾಡಿಕೊಂಡಳು ನಿಧಿ.

ಮೀರಾ ಹೆಸರು ಕೇಳಿದ ತಕ್ಷಣ ಗಕ್ಕನೆ ಎಂದು ಕುಳಿತ ಚಿರಂತ್”ಮೀರಾ ಬಂದಿದ್ಲಾ ನನ್ ನೋಡೋಕೆ”ಎಂದು ಕಾತುರದಿಂದ ಕೇಳಿದ.

“ಹ್ಮ್… ಬಂದಿದ್ದು ಆಯ್ತು, ನಿಮ್ಮನ್ನು ನೋಡಿ ಅತ್ತಿದ್ದು ಆಯ್ತು, ಅತ್ತು ಪಿಜಿಗೆ ಹೋಗಿದ್ದು ಆಯ್ತು”

“ಏನು ಮೀರಾ ಅತ್ತಳಾ”ಎಂದು ಕೇಳಿದ ಮತ್ತೂ ಕುತೂಹಲದಿಂದ..

“ಹ್ಮ್ ತುಂಬಾ ಅಳ್ತಿದ್ಳು. ಅವ್ಳಿಗೇನ್ ಹುಚ್ಚಾ ಮಧ್ಯಾಹ್ನ ನಿಮ್ನ ನೋಡಿದ್ರೆ ಒಳ್ಳೆ ದುಷ್ಮನ್ ತರ ನೋಡ್ತಿದ್ಲು,ಆದ್ರೆ ಆಸ್ಪತ್ರೆಯಲ್ಲಿ ನಿಮ್ನ ನೋಡಿ ಏನೋ ಆಗಿರೋರ್ ತರ ಜೋರಾಗಿ ಅಳೋಕೆ ಶುರುಮಾಡಿದ್ಲು.ನಂಗ್ ಅನಿಸ್ತಿದೆ ಇದರ ಹಿಂದೆ ಏನೋ ಒಂದ್ ದೊಡ್ ಸ್ಟೋರಿನೇ ಇರಬೇಕು ಅಂತ. ಏನ್ ಹೇಳಿ”ಎಂದು ಚಿರಂತನನ್ನು ಪೀಡಿಸಿದಳು.

“ನಾನು ಅವ್ಳು ಚಿಕ್ಕಂದಿನಲ್ಲಿ ತುಂಬಾ ಚೆನ್ನಾಗಿ ಓದುತ್ತಿದ್ದೆವು. ಆದ್ರೆ ಸ್ವಲ್ಪ ದೊಡ್ಡವರು ಆಗ್ತಾ ಆಗ್ತಾ ನನ್ಗೆ ಸ್ವಲ್ಪ ಜ್ಞಾಪಕಶಕ್ತಿ ಕಡಿಮೆ ಆಗಿ ಮರೆವು ಜಾಸ್ತಿ ಆಯ್ತು. ಅದ್ಕೆ ಎಕ್ಸಾಮ್ ಅಲ್ಲಿ ಕಡಿಮೆ ಮಾರ್ಕ್ಸ್ ಬರ್ತಿದ್ವು.ಪದೇ ಪದೇ ಇದು ರಿಪೀಟ್ ಆದಾಗ ನಮ್ಮಪ್ಪನಿಗೆ ನನ್ನ ಓದಿಸಲು ಇಷ್ಟವಿರಲಿಲ್ಲ. ಆದ್ರೆ ಮೀರಾ ನನ್ ಮೇಲೆ ನಂಬಿಕೆ ಇಟ್ಟು ನಮ್ ಅಪ್ಪನತ್ರ ಏನೇನೋ ಹೇಳಿ ನನ್ನ ಓದಿಸೋ ತರ ಮಾಡ್ತಿದ್ಲು ನಾನ್ ಮತ್ತೆ ಮತ್ತೆ ಫೇಲ್ ಆದಾಗ ಅವ್ಳ್ ನನ್ನ ಮಾತಾಡಿಸೋದೇ ಬಿಟ್ಟಳು. ಆದ್ರೂ ನಾನ್ ಅಂದ್ರೆ ಅವಳಿಗೆ ಈಗ್ಲೂ ತುಂಬಾ ಇಷ್ಟ”ಎಂದ ಚಿರಂತ್.

ಹೀಗೆ ಇವರ ಸಂಭಾಷಣೆ ನಡೆಯುತ್ತಿರುವಾಗ ಅಲ್ಲಿಗೆ ಬಂದ ತುಳಸಿ”ಏನಪ್ಪಾ..!ಈಗ್ ಹೇಗಿದ್ದಿಯಾ”ಎಂದು ಕೇಳಿದಳು.

ತುಳಸಿ ಹೀಗೆ ಕೇಳಿದೊಡನೆ ಚಿರಂತ್ ನಿಧಿ ಕಡೆ ತಿರುಗಿ “ಇವ್ರ್ ಯಾರು ಅಂತ ಕೇಳಿದ”.

ಅವನ ಮಾತುಗಳಿಂದ ಆಶ್ಚರ್ಯಳಾದ ತುಳಸಿ “ನನ್ನ ಕಾಪಾಡಿ ನೀನ್ ಮರೆತರು ನಾನ್ ಮರೆಯಲ್ಲ ಕಣಪ್ಪ. ನನ್ ಮಗಳಂತೂ ನಿನ್ನ ಮರೆಯೋದೆ ಇಲ್ಲ ಬಿಡು”ಎಂದು ನಕ್ಕಳು ನಿಧಿಯನ್ನು ಬಳಸಿ.

“ಅದ್ ಬಿಡು ಈಗ ಹೇಗಿದ್ದಿಯಾ ನೀನು”ಎಂದು ಮತ್ತೆ ಕೇಳಿದಳು ತುಳಸಿ.

“ಹ್ಮ್  ಚೆನ್ನಾಗಿದ್ದೀನಿ”ಎಂದ ಮತ್ತೂ ಗೊಂದಲದಿಂದ.

“ಹ್ಮ್ ಸರಿ.ಊಟ ತರಿಸಿದ್ದೀನಿ ಊಟ ಮಾಡಿ ರೆಸ್ಟ್ ತಗೋ ನಾನ್ ಬೆಳಗ್ಗೆ  ಬಂದು ನಿನ್ನ ಮಾತಾಡಿಸುತ್ತೀನಿ “ಎಂದಳು ತುಳಸಿ.

“ಮಮ್ಮಿ ಇವತ್ತು ನಾನ್ ಇಲ್ಲೇ ಇರುತ್ತೀನಿ ಇವರನ್ನು ನೋಡ್ಕೊಂಡು”ಎಂದಳು ನಿಧಿ ಚಿರಂತನನ್ನು ನೋಡುತ್ತಾ..

“ಅಯ್ಯೋ ಕೋತಿ ಅವರನ್ನು ನೋಡಿಕೊಳ್ಳೋಕೆ ನಮ್ ಆಸ್ಪತ್ರೆಯಲ್ಲಿ ತುಂಬಾ ಜನ ನರ್ಸ್ ಇದ್ದಾರೆ. ನಾನ್ ಅವ್ರಿಗೆ ಆಗ್ಲೇ ಹೇಳಿದೀನಿ ಚಿರಂತ್ ಗೆ ಯಾವುದೇ ತೊಂದರೆ ಬಾರದ ಹಾಗೇ ನೋಡಿಕೊಳ್ಳೋಕೆ”ಎಂದಳು ತುಳಸಿ.

“ಇಲ್ಲ ಮಮ್ಮಿ ನಾನ್ ಬರಲ್ಲ ಅವರೆಲ್ಲಾ ನೋಡಿಕೊಳ್ಳೋದು ಬೇರೆ ನಾನ್ ನೋಡಿಕೊಳ್ಳೋದು ಬೇರೆ. ನಮ್ ಅಮ್ಮನ ಪ್ರಾಣ ಉಳಿಸಿದೋರನ್ನ ನಾನೇ ಹತ್ತಿರ ಇದ್ದು ಚೆನ್ನಾಗಿ ನೋಡ್ಕೋಬೇಕು”ಎಂದಳು ನಿಧಿ ಮುನಿಸಿನಿಂದ.

“ಅಯ್ಯೋ ಹುಚ್ಚುಡಿಗಿ ನಿನ್ನೊಬ್ಬಳನ್ನೇ ಬಿಟ್ಟು ನಾನ್ ಹೇಗೆ ಹೋಗ್ಲಿ ನಾನು ನೀನ್ ಜೊತೆಯಲ್ಲೇ ಇರುತ್ತೀನಿ.ಭಟ್ಟರು ಅಂಕಲ್ ಗೆ ಊಟ ಇಲ್ಲಿಗೆ ತರೋಕೆ ಹೇಳ್ತಿನಿ”ಎಂದಳು ತುಳಸಿ ನಿಧಿಯ ತಲೆಯನ್ನು ನೇವರಿಸುತ್ತಾ.

“ನನ್ ಗುಡ್ ಮಮ್ಮಿ”ಎಂದು ತುಳಸಿಯನ್ನು ತಬ್ಬಿಡಿದಳು ನಿಧಿ…

ಅಷ್ಟರಲ್ಲಿ ಅಲ್ಲಿಗೆ ಬಂದ ನರ್ಸ್ “ಮೇಡಂ ಸಂಜೆ ಕೊಟ್ಟ ರಿಪೋರ್ಟ್ ನೋಡಿದ್ರಾ”ಎಂದು ಕೇಳಿದಳು.

“ಸಾರೀ ಸಾರೀ ಮರೆತು ಬಿಟ್ಟೆ ಅಲ್ಲೇ ಟೇಬಲ್ ಮೇಲೆ ಇದೆ ಈಗ ನೋಡ್ತೀನಿ”ಎಂದು ಅಲ್ಲಿಂದ ಎದ್ದು ಒಂದೆರಡು ಹೆಜ್ಜೆ ಹಾಕಿ ಹಿಂತಿರುಗಿದ ತುಳಸಿ ಮಗಳನ್ನು ನೋಡುತ್ತಾ”ನಿಧಿ ಚಿರಂತ್ಗೆ  ಊಟ ಬಡಿಸು,ಊಟ ಆದ್ಮೇಲೆ ಅಲ್ಲಿಟ್ಟಿರೋ ಟ್ಯಾಬ್ಲೆಟ್ ಕೊಡು. ಅವ್ನ್ ಮಲಗಿದ ಮೇಲೆ ನೀನು ಬಾ ಊಟ ಮಾಡುವಂತೆ”ಎಂದು ಹೇಳಿ ಹೊರ ನಡೆದಳು.

ನಿಧಿ ಚಿರಂತ್ಗೆ ಊಟ ಬಡಿಸಿ ಟ್ಯಾಬ್ಲೆಟ್ ಕೊಟ್ಟ ನಿಧಿ “ಟ್ಯಾಬ್ಲೆಟ್ ತಗೊಂಡು ಆರಾಮಾಗಿ ಮಲ್ಕೊಳ್ಳಿ”ಎಂದಳು ಪ್ರೀತಿಯಿಂದ.

“ಅದ್ ಸರಿ ನನ್ನ ಇಲ್ಲಿಂದ ಯಾವಾಗ ಡಿಸ್ಚಾರ್ಜ್ ಮಾಡ್ತಾರೆ  ಮನೇಲಿ ಅಪ್ಪ ಒಬ್ರೇ ಇದ್ದಾರೆ ನಾನ್ ಬೇಗ ಹೋಗ್ಬೇಕು”ಎಂದು ಭಯದಿಂದ ನುಡಿದ ಚಿರಂತ್.

“ಓ…ಹೌದಾ.ಅಮ್ಮ ಹೇಳಿದ್ರಲ್ವಾ ಬೆಳಗ್ಗೆ ಬಂದು ಮಾತಾಡಿಸ್ತಿನಿ ಅಂತ ಆವಾಗ್ಲೇ ಕೇಳಿದ್ರೆ ಆಯ್ತು ಈಗ ನೀವ್ ರೆಸ್ಟ್ ಮಾಡಿ”ಎಂದು ಹೇಳಿ ತುಳಸಿ ಬಳಿ ಹೋದಳು.

ನಿಧಿ ತುಳಸಿ ಬಳಿ ಹೋದಾಗ ಚಿರಂತನ ಹೆಲ್ತ್  ರಿಪೋರ್ಟ್ ಹಿಡಿದು ಚಿಂತಾಕ್ರಾಂತಳಾಗಿ  ಕೂತಿದ್ದಳು.ಅವಳಲ್ಲಿ ಯಾವುದೋ ದುಗುಡ ಮನೆಮಾಡಿತ್ತು.ಮುಖ ರೋಗಿಯಂತೆ ಬಾಡಿ ಹೋಗಿತ್ತು.

ತಾಯಿಯನ್ನು ಈ ಸ್ಥಿತಿಯಲ್ಲಿ ನೋಡಿದ ನಿಧಿ “ಏನಾಯ್ತಮ್ಮ ಯಾಕ್ ಹೀಗ್ ಕೂತಿದಿಯಾ”ಎಂದು ಕೇಳಿದಳು ಸಂದೇಹದಿಂದ.

ತುಳಸಿ ಮರೆಮಾಚುತ್ತಾ “ಏನ್ ಇಲ್ಲ ಚಿನ್ನಿ,ಬಾ ಊಟ ಮಾಡು”ಎಂದು ಭಟ್ಟರು ತಂದಿಟ್ಟಿದ್ದ ಊಟವನ್ನು ನಿಧಿ ಕೈಗಿಟ್ಟಳು.

“ಮಮ್ಮಿ ಅದಿರ್ಲಿ ಯಾಕೆ ಹೀಗ್ ಬೇಜಾರಾಗಿದೀಯಾ ಏನಾಯ್ತು ಹೇಳಮ್ಮ”ಎಂದು ಪೀಡಿಸಿದಳು ನಿಧಿ.

“ಹೇಳ್ತಿನಿ ಊಟ ಮಾಡು ನೀನು”ಎಂದಳು ಮಾತು ಮರೆಸುತ್ತಾ.

“ಬಾ ಮಮ್ಮಿ ಇಬ್ರು ಜೊತೆಯಲ್ಲೇ ಮಾಡೋಣ”ಎಂದು ತುಳಸಿಯನ್ನು ಕುಳ್ಳಿರಿಸಿದಳು.

ತುಳಸಿ ಏನನ್ನೋ ಯೋಚನೆ ಮಾಡುತ್ತಾ ತುತ್ತನ್ನು ನಿಧಾನವಾಗಿ ಬಾಯಲ್ಲಿ ಇಟ್ಟುಕೊಳ್ಳುತಿದ್ದವಳನ್ನು ನೋಡಿದಾ ನಿಧಿ”ಏ ತುಳಸಿ ಯಾಕೆ ಹೀಗೆ ಒಳ್ಳೆ ಗರಬಡಿದವರಂತೆ ಕೂತಿದಿಯಾ ಏನಾಯ್ತು ಹೇಳು ಅಂತ ಆಗ್ಲಿಂದ ಕೇಳ್ತಿದಿನಿ ಹೇಳ್ತಿನಿ ಹೇಳ್ತಿನಿ ಅಂತ ಮಾತು ಮರೆಸುತ್ತಿದ್ದೀಯಾ”ಎಂದಳು ನಿಧಿ ಮುನಿಸಿನಿಂದ.

ಯೋಚನೆಯಿಂದ ಹೊರ ಬಂದ ತುಳಸಿ “ಇದೇನೋ ಅಮ್ಮನಿಗೆ ಮರ್ಯಾದೆ ಕೊಡದೆ ಮಾತಾಡುತ್ತಿದ್ದೀಯಾ”ಎಂದಳು ನಗುತ್ತಾ.

“ಆಗ್ಲಿಂದ ಮಮ್ಮಿ…!ಏನಾಯ್ತು, ಮಮ್ಮಿ…!ಏನಾಯ್ತು ಅಂತ ಕೇಳ್ತಿಲ್ವ ಮರ್ಯಾದೆಯಿಂದ”ಎಂದಳು ಕೊಂಚ ಸಿಟ್ಟಿನಿಂದ.

ತುಳಸಿ ಅವಳ ಮುನಿಸಿಗೆ ನಗುತ್ತಾ”ಹೋಗ್ಲಿ ಬಿಡು, ಚಿರಂತ್ ಮಲಗಿದ್ನಾ..?”ಎಂದು ಕೇಳಿದಳು.

“ಹ್ಮ್ ಮಮ್ಮಿ ಮಲ್ಗಿದ್ರು. ಅಮ್ಮಾ…!ಅವ್ರ್ ಅಪ್ಪ ಮನೇಲಿ ಒಬ್ಬರೇ ಇದಾರೆ ನಾನ್ ಬೇಗ ಹೋಗ್ಬೇಕು ಯಾವಾಗ್ ಡಿಸ್ಚಾರ್ಜ್ ಮಾಡ್ತಾರೆ ಅಂತ ಕೇಳ್ತಿದ್ರು”

“ಸದ್ಯಕ್ಕೆ ಚಿರಂತನನ್ನು ಡಿಸ್ಚಾರ್ಜ್ ಮಾಡುವ ಯೋಚನೆಯು ಸಹ ನನಗೆ ಬರಲ್ಲ. ಅವನ ಪರಿಸ್ಥಿತಿ ನಾವ್ ಅನ್ಕೊಂಡಿರೋ ಅಷ್ಟ್ ಚೆನ್ನಾಗಿಲ್ಲ ತುಂಬಾ ಹದಗೆಟ್ಟಿದೆ. ಒಂದ್ ಮಾತಿನಲ್ಲಿ ಹೇಳಬೇಕೆಂದರೆ ‘ಹಿ ಇಸ್ ಇನ್ ಡೇಂಜರ್ ಸ್ಟೇಜ್’ಎಂದಳು.

ತುಳಸಿಯ ಮಾತು ಕೇಳಿ ಒಂದು ಕ್ಷಣ ಅವಕ್ಕಾದ ನಿಧಿ “ಮಮ್ಮಿ ಏನಾಗಿದೆ ಅವ್ರಿಗೆ..? ಹೇಳಿ ಮಮ್ಮಿ”ಎಂದು ಕೇಳಿದಳು ಭಯದಿಂದ.

ಸ್ನೇಹ ಚಿರಾಯು ಮುಂದುವರೆಯುವುದು….

ಈ ಸ್ನೇಹ ಚಿರಾಯು ನೀವು ಇಂಗ್ಲಿಷ್ ಭಾಷೆಯಲ್ಲಿಯೂ ಓದಬಹುದು.

ನಮ್ಮ ವೆಬ್ಬೆಟ್ ನ ಇತರ ಪೋಸ್ಟ್ ಗಳನ್ನು ಇಲ್ಲಿ ಓದಬಹುದು.

ಸ್ನೇಹ ಚಿರಾಯು

Comments

No comments yet. Why don’t you start the discussion?

Leave a Reply

Your email address will not be published. Required fields are marked *