🎭ಅಜ್ಞಾತ ವ್ಯಕ್ತಿಯ ನೆರಳು
ಸ್ನೇಹ ಚಿರಾಯು-17-ಮೀರಾ ಪಿಜಿ ಖಾಲಿ ಮಾಡಿ ಮನೆಗೆ ಬಂದಳು. ಪಿಜಿಯಲ್ಲಿ ಒಂಟಿಯಾಗಿದ್ದ ಮಾನ್ಯಳಿಗೆ ಮೀರಾಳನ್ನು ಬಿಟ್ಟಿರಲಾಗಲಿಲ್ಲ.ಇದನ್ನು ಗಮನಿಸಿದ ಮೀರಾ ಮಾನ್ಯಳನ್ನು ಸಹ ತಾವಿರುವ ಮನೆಯಲ್ಲೇ ಇರಲಿ ಎಂದು ಪಿಜಿಯಿಂದ ಕರೆದುಕೊಂಡು ಬಂದಳು.
ಅಂದಿನಿಂದ ಮೀರಾ, ಮಾನ್ಯ ನಕುಲನ ಜೊತೆಯಲ್ಲೇ ಕಾಲೇಜಿಗೆ ಹೋಗುತ್ತಿದ್ದರು
ಪ್ರಣವ್ ತನ್ನ ಪಾಡಿಗೆ ಮನೆಯಿಂದ ಬರುತ್ತಿದ್ದ. ಆದರೆ ನಿಧಿ ಚಿರು ಜೊತೆ ಕಾಲೇಜಿಗೆ ಬರುತ್ತಿದ್ದಳು.ನಿಧಿ ಬರಬರುತ್ತಾ ಚಿರುಗೆ ತುಂಬಾ ಕ್ಲೋಸ್ ಆಗಿದ್ದಳು. ಇದನ್ನು ಗಮನಿಸಿದ ಮೀರಾ ಈ ವಿಷಯದ ಬಗ್ಗೆ ನಿಧಿಯೊಂದಿಗೆ ಮಾತಾಡಬೇಕು ಅಂದುಕೊಂಡಿದ್ದಳು..
ಹೀಗೆ ಐದು ಜನ ಒಟ್ಟಿಗೆ ಉಳಿದ ಇನ್ನೊಂದೆರಡು ವರ್ಷ ಚೆನ್ನಾಗಿ ಓದಿ ಬಿಎಸ್ಸಿ ಡಿಗ್ರಿ ಪಡೆದರು.ನಂತರ ಪ್ರಣವ್, ಮಾನ್ಯ ಕೆಲಸಕ್ಕೆಂದು ಕಂಪೆನಿಗೆ ಸೇರಿಕೊಂಡರೆ ಉಳಿದ ಮೀರಾ, ನಕುಲ್, ನಿಧಿ ಮಡಿಕೇರಿಯಲ್ಲೇ ಉನ್ನತ ಶಿಕ್ಷಣ ಮಾಡಬೇಕೆಂದು ನಿರ್ಧರಿಸಿದ್ದರು.
ಒಂದು ದಿನ ಮೀರಾಳನ್ನು ಕಾಲೇಜಿನ ಮುಂದೆ ಬಿಟ್ಟ ನಕುಲ್”ಸ್ವಲ್ಪ ಕೆಲಸ ಇದೆ.ನೀನ್ ಕ್ಲಾಸ್ಗೆ ಹೋಗು ನಿಧಿ ಬರ್ತಾಳೆ ಮಾತಾಡ್ತಾ ಇರು ನಾನ್ ಹೋಗ್ ಬರ್ತೀನಿ”ಎಂದು ಹೇಳಿ ಹೊರಟ.
“ಹ್ಮ್ ಸರಿ”ಎನ್ನುತ್ತಾ ಮೀರಾ ಕಾಲೇಜ್ ಒಳಗೆ ಹೋಗಲು ಶುರುಮಾಡಿದಳು.ಅವಳನ್ನು ದೂರದಿಂದ ಯಾರೋ ನೋಡಿದಂತೆ ಅನಿಸಿ ಹಿಂದೆ ತಿರುಗಿ ನೋಡಿದಳು.ಆದರೆ ಯಾರೊಬ್ಬರ ಸುಳಿವು ಅವಳಿಗೆ ತಿಳಿಯಲಿಲ್ಲ.ಮುಂದೆ ಸಾಗಿದಳು ಈ ಬಾರಿ ಯಾರೋ ಹಿಂಬಾಲಿಸಿದಂತೆ ಅನಿಸಿ ಒಮ್ಮೆಲೇ ಹಿಂದೆ ತಿರುಗಿದಳು ಮತ್ತೂ ಅವಳಿಗೆ ಯಾರೆಂದು ತಿಳಿಯಲಿಲ್ಲ. ತಲೆಕೆಡಿಸಿಕೊಳ್ಳದೆ ಮತ್ತೆ ಮುಂದೆ ಸಾಗುತ್ತಿರುವಾಗ”ಮೀರಾ”ಎಂಬ ಕೂಗು ಕೇಳಿಸಿತು.ಗಕ್ಕನೆ ಹಿಂದೆ ತಿರುಗಿ ನೋಡಿದರೆ ನಿಧಿ.

ನಿಧಿಯನ್ನು ಕುರಿತು”ಓ ನಿನಾ”ಎಂದಳು ನಿಟ್ಟುಸಿರು ಬಿಡುತ್ತಾ.
“ಹು ನಾನೇ ಇದ್ಯಾಕೆ ಹೀಗ್ ಕೇಳ್ತಿದೀಯಾ”ಎಂದು ಕೇಳಿದಳು ಆಶ್ಚರ್ಯದಿಂದ.
“ಏನು ಇಲ್ಲಾ ನಿಧಿ ದೂರದಿಂದ ಯಾರೋ ನನ್ನ ನೋಡ್ತಿದಾರೆ,ಫಾಲೋ ಮಾಡ್ತಿದಾರೆ ಅಂತ ಅನಿಸ್ತಿದೆ”
“ಹೌದಾ… ನಿನ್ನ ನಕುಲ್ ಬಿಟ್ರೆ ಇನ್ಯಾರೋ ಫಾಲೋ ಮಾಡ್ತಾರೆ.ಹೌದು ನಕುಲ್ ಎಲ್ಲಿ”
“ನನ್ನ ಬಿಟ್ಟು ಏನೋ ಕೆಲಸ ಇದೆ ಬರ್ತೀನಿ ಅಂತ ಹೇಳಿ ಹೋದ.ನಿನ್ ಯಾರ್ ಜೊತೆ ಬಂದೆ”
“ಚಿರು ಜೊತೆ ಬಿಟ್ರೆ ಇನ್ಯಾರೋ ಜೊತೆ ಬರ್ತೀನಿ ನಾನು”
💞ಅಸ್ಪಷ್ಟ ಅನುಮಾನಕ್ಕೆ, ಸ್ಪಷ್ಟ ಸಮಾಧಾನ
ಚಿರು ಹೆಸರು ಕೇಳಿದೊಡನೆ ಸ್ವಲ್ಪ ಮಂಕಾದ ಮೀರಾ”ನಿಧಿ ಇದ್ನ ಕೇಳ್ಬೇಕೋ ಬೇಡ್ವೊ ಗೊತ್ತಿಲ್ಲ.ಒಂದು ಕೇಳ್ತೀನಿ ಆನ್ಸರ್ ಮಾಡ್ತಿಯಾ.ನೀನೇನು ಅನ್ಕೊಳಲ್ಲ ಅಂದ್ರೆ ಮಾತ್ರ”
“ಮೀರಾ ಇವೆಲ್ಲ ಫಾರ್ಮಾಲಿಟಿಸ್ ಯಾಕೆ ಅದೇನ್ ಕೇಳ್ಬೇಕು ಅನ್ಕೊಂಡಿದೀಯೋ ಕೇಳು”
“ಹ್ಮ್”ಎಂದವಳೇ “ನೀನು ಚಿರುನ ಇಷ್ಟ ಪಡ್ತಿದೀಯಾ”ಎಂದು ಕೇಳಿದಳು.
ಮೀರಾಳ ಮಾತಿಗೆ ಒಂಚೂರು ಬೆರಗಾಗದ ನಿಧಿ”ಅವನನ್ನು ಸರಿಯಾಗಿ ಅರ್ಥ ಮಾಡ್ಕೊಂಡ್ರೆ ಯಾರಿಗೆ ಬೇಕಾದ್ರೂ ಅವನು ಇಷ್ಟ ಆಗ್ತಾನೆ”ಎಂದಳು ಮಂದಹಾಸ ಬೀರುತ್ತಾ.
“ಅಂದ್ರೆ, ನಾನ್ ಅವ್ನ ಅರ್ಥ ಮಾಡ್ಕೊಂಡಿಲ್ವ”
“ನೀನ್ ಅವನನ್ನು ಎಸ್ಟ್ ಇಷ್ಟ ಪಡ್ತೀಯೋ ಗೊತ್ತಿಲ್ಲ ಬಟ್ ನಿಂಗೊಂದ್ ಹೇಳ್ತಿನಿ ಕೇಳು.ನಂಗ್ ಅನ್ನಿಸಿರೋ ಮಟ್ಟಿಗೆ ಅವನನ್ನು ದೂರದಿಂದಲೇ ನೋಡಿ ಅರ್ಥ ಮಾಡ್ಕೊಂಡಿದೀಯಾ ಅನ್ಸುತ್ತೆ. ಸ್ವಲ್ಪ ಹತ್ತಿರದಿಂದ ನೋಡಿ ಅರ್ಥ ಮಾಡ್ಕೊಳ್ಳೋಕೆ ಟ್ರೈ ಮಾಡು”ಎಂದು ಸಲಹೆ ಕೊಟ್ಟಳು ನಿಧಿ.
“ನಿಧಿ ನಿನ್ ಸಲಹೆಗಳು ನಂಗ್ ಬೇಕಾಗಿಲ್ಲ ನಾನ್ ಎಸ್ಟ್ ಕೇಳಿದ್ನೋ ಅಷ್ಟಕ್ಕೇ ಮಾತ್ರ ಉತ್ತರ ಕೊಡು ಬೇರೆ ಬೇಡ”ಎಂದಳು ಕೋಪದಿಂದ.

“ಓಹೋ ಸರಿ ಮೇಡಂ ನಿಮ್ಗೆ ಕೇಳೋಕ್ ಇಷ್ಟ ಇಲ್ವಾ ಅಂದ್ಮೇಲೆ ನಾನ್ ಹೇಳಿದ್ರೆ ತಪ್ಪಾಗುತ್ತೆ.ಹೌದು ನೀನ್ ಏನ್ ಕೇಳ್ದೆ ಹೇಳು.ಹಾ…..ನೆನಪು ಬಂತು ಚಿರಂತ್ ಅಂದ್ರೆ ಇಷ್ಟಾನಾ ಅಂತ ಕೇಳ್ದೆ.ಹ್ಮ್ ಮೀರಾ ಚಿರಂತ್ ಅಂದ್ರೆ ನನ್ಗೆ ತುಂಬಾ ಅಂದ್ರೆ ತುಂಬಾ ಇಷ್ಟ”ಎಂದು ಮೀರಾ ಕೇಳಿದ ಪ್ರಶ್ನೆಗೆ ಉತ್ತರಿಸಿದಳು.
“ಹೌದಾ… ಮತ್ತೆ ಚಿರುಗೆ ಹೇಳು”
“ಹೇಳಿದ್ರೂ ಏನು ಉಪಯೋಗ ಇಲ್ಲಾ ಮೀರಾ. ಅವ್ನ್ ನನ್ ಪ್ರೀತಿ ಒಪ್ಕೋಳಲ್ಲ. ನಂದೇ ಅಲ್ಲ ಯಾರ್ ಪ್ರಪೋಸ್ ಮಾಡಿದ್ರು ಅವ್ನ್ ಒಪ್ಕೋಳಲ್ಲ”
“ಮೊದ್ಲು ಹೇಳಿದ್ರೆ ತಾನೇ ಗೊತ್ತಾಗೋದು ಒಪ್ಕೋತಾನೋ ಇಲ್ವೋ ಅಂತ”
“ನಂಗ್ 100 ಪರ್ಸೆಂಟ್ ಗೊತ್ತು ಅವ್ನ್ ಒಪ್ಕೋಳಲ್ಲ ಅಂತ”
“ಸರಿ ನಿಧಿ ಒಪ್ಕೊಳ್ಳಿಲ್ಲ ಅಂದ್ರು ಪರವಾಗಿಲ್ಲ. ಮನಸಿನಲ್ಲಿರೋದು ಅವ್ನ್ ಹತ್ರ ಹೇಳ್ಕೊಂಡ್ರೆ ನಿಂಗ್ ಭಾರ ಕಮ್ಮಿ ಆಗುತ್ತೆ. ಮೊದ್ಲು ಅವನಿಗೆ ನಿನ್ ಇಷ್ಟ ಪಡ್ತಿರೋ ವಿಷ್ಯ ಹೇಳು”ಎಂದಳು.
ಮೀರಾ ಹೇಳಿದ್ದು ಅವಳಿಗೆ ನಿಜ ಅನಿಸಿತ್ತು. “ಹೇಳ್ಕೊಂಡ್ರೆ ಹೋಗೋದ್ ಏನಿದೆ.
ನನ್ನ ಪ್ರೀತಿ ಅವನಿಗೆ ಕೊನೆಗೂ ಗೊತ್ತಾಗ್ಲಿಲ್ಲ ಅನ್ನೋ ನೋವು ಬೇಡ.ಹೇಳಿಬಿಡೋಣ”ಎಂದು ತೀರ್ಮಾನ ಮಾಡಿದಳು.
“ಹ್ಮ್ ಸರಿ ಮೀರಾ ಇವತ್ತು ಸಂಜೆನೇ ಹೇಳ್ತಿನಿ”ಎಂದಳು.ಇವರ ಮಾತು ಮುಗಿಯುವ ವೇಳೆಗೆ ನಕುಲ್ ಅಲ್ಲಿ ಹಾಜರಿದ್ದ..
ಸಂಜೆ ಕಾಲೇಜ್ ಮುಗಿದಮೇಲೆ ಮೀರಾ, ನಕುಲ್ ಮನೆಗೆ ತೆರಳಿದರು.ಎಂದಿನಂತೆ ನಿಧಿಯನ್ನು ಕರೆದುಕೊಂಡು ಹೋಗಲು ಚಿರು ಬಂದಿದ್ದ.
ಬೈಕಿನಲ್ಲಿ ಕೂತ ನಿಧಿಗೆ”ನೀನ್ ಚಿರುನ ಇಷ್ಟ ಪಡ್ತಿರೋ ವಿಷ್ಯನ ಹೇಳು ಬೇಗ”ಎಂದು ತನ್ನ ಅಂತರಾತ್ಮ ಹೇಳುತಿತ್ತು.
ಬೈಕ್ ನಿಲ್ಲಿಸಲು ಹೇಳಿದಳು. ಅವಳು ಹೇಳಿದಂತೆ ಬೈಕ್ ನಿಲ್ಲಿಸಿದ ಚಿರು”ಏನ್ ನಿಧಿ ಇಲ್ಲಿ ನಿಲ್ಲಿಸೋಕೆ ಹೇಳ್ದೆ”ಎಂದು ಕೇಳಿದ.
❤️ಅಂತರಾಳದ ಪ್ರೇಮ ನಿವೇದನೆ
“ಚಿರು ನಾನ್ ನೀನ್ ಜೊತೆ ಮಾತಾಡ್ಬೇಕು”
“ಮನೆಯಲ್ಲಿ ಮಾತಾಡೋಣ ಬಾ ಈಗೇನ್ ಅಷ್ಟ್ ಅವಸರ ನಿನ್ಗೆ”
“ಇಲ್ಲಾ ಚಿರು ನಾನ್ ಈಗ್ಲೇ ಮಾತಾಡ್ಬೇಕು”ಎಂದು ಅಲ್ಲೇ ಇದ್ದ ಪಾರ್ಕಿನೊಳಗೆ ಕರೆದುಕೊಂಡು ಹೋದಳು.
ಪಾರ್ಕಿಗೆ ಕರೆದುಕೊಂಡು ಬಂದ ನಿಧಿ. ಒಂದತ್ತು ನಿಮಿಷ ಏನು ಮಾತಾಡದೆ ಸುಮ್ಮನೆ ಕೈಕಟ್ಟಿ ನಿಂತಿದ್ದಳು.
ಈಗ್ ಮಾತಾಡ್ತಾಳೆ ಆಗ್ ಮಾತಾಡ್ತಾಳೆ ಎಂದು ಕಾಯುತ್ತಾ ನಿಂತಿದ್ದ ಚಿರಂತ್ಗೆ ಸ್ವಲ್ಪ ಕೋಪ ಬಂದು”ಏನ್ ನಿಧಿ ನೀನು ಏನೋ ಮಾತಾಡ್ಬೇಕು ಅಂತ ಕರ್ಕೊಂಡ್ ಬಂದು ಈಗ ಸೈಲೆಂಟಾಗಿ ಆ ಕಡೆ ತಿರ್ಕೊಂಡು ನಿಂತ್ಕೊಂಡಿದಿಯಾ”ಎಂದ.
ಆಗಲೂ ಮಾತಾಡದ ನಿಧಿಯನ್ನು ನೋಡಿ ತಾಳ್ಮೆ ಕಳೆದುಕೊಂಡ ಚಿರು ಹತ್ತಿರ ಬಂದು”ನಿಧಿ”ಎಂದು ಭುಜವಿಡಿದು ಅಲುಗಾಡಿಸಿದ.
ನಿಧಿ ಈ ಕಡೆ ತಿರುಗಿದವಳೇ”ಲವ್ ಯು ಚಿರು”ಎಂದು ಒಮ್ಮೆಲೇ ಹೇಳಿಬಿಟ್ಟಳು.
ಅವಳ ಮಾತಿಂದ ಕಂಗೆಟ್ಟ ಚಿರು”ವಾಟ್”ಎಂದು ಉದ್ಗರಿಸಿದ.
“ಐ ಲವ್ ಯು ಚಿರು”ಎಂದು ಮತ್ತೊಮ್ಮೆ ಹೇಳಿದಳು.
“ಮೀರಾ ಏನ್ ಮಾತಾಡ್ತಿದೀಯಾ ಅಂತ ಗೊತ್ತಿದ್ದೇ ಮಾತಾಡ್ತಿದೀಯಾ ತಾನೇ”
“ಹ್ಮ್ ಚಿರು ಗೊತ್ತಿದ್ದೇ ಮಾತಾಡ್ತಿದಿನಿ. ಐ ಲವ್ ಯು”
“ಹೇಯ್… ನಿಂಗೇನ್ ಹುಚ್ಚಿಡ್ದೀದಿಯಾ ಯಾಕ್ ಈ ತರ ಮಾತಾಡ್ತಿದೀಯಾ”
“ಹೌದು ನಿನ್ ಪ್ರೀತಿ ಹುಚ್ಚಿಡಿದಿದೆ ನನ್ಗೆ”
“ನಿಧಿ ನಿನ್ಗೆ ಗೊತ್ತಲ್ವಾ ಕೊನೆವರೆಗೂ ನಾನ್ ನಿನ್ ಜೊತೆಗೆ ಇರೋಕಾಗಲ್ಲ ಅಂತ. ಎಲ್ಲಾ ಗೊತ್ತಿರೋ ನೀನೇ ಹೀಗ್ ಮಾತಾಡಿದ್ರೆ ನಾನ್ ಏನ್ ಮಾಡ್ಲಿ”
“ಕೊನೆವರೆಗೂ ಬೇಡ ಚಿರು.ನನ್ನ ಪ್ರೀತಿಸ್ತಿದೀನಿ ಅಂತ ಹೇಳು. ನೀನ್ ಇರುವಷ್ಟು ದಿನ ನಿನ್ನ ಜೊತೆನಲ್ಲೇ ಇದ್ದು ಮರೆಯೋಕಾಗ್ತಿರೋ ನೆನಪುಗಳನ್ನೆಲ್ಲಾ ಕುಡಿಡ್ಕೋತೀನಿ.ನೀನ್ ಬಿಟ್ಟೊದ್ಮೇಲೆ ಆ ನೆನಪುಗಳಿಂದ ಇಡೀ ಲೈಫ್ ಕಳ್ದ್ಬಿಡ್ತೀನಿ”
“ನಿಧಿ ಇದ್ ಸ್ವಲ್ಪ ಜಾಸ್ತಿ ಆಯ್ತು.ನಿನ್ನ ಪ್ರೀತಿಸ್ತಿದೀನಿ ಅಂತ ಹೇಳಿ ನಿಂಗ್ ಮೋಸ ಮಾಡೋಕ್ ನಂಗ್ ಇಷ್ಟ ಇಲ್ಲಾ. ಪ್ಲೀಸ್ ನನ್ನ ಅರ್ಥ ಮಾಡ್ಕೋ”ಎಂದು ಕೈ ಮುಗಿದ.

ಚಿರುನ ತಬ್ಬಿಡಿದ ನಿಧಿ”ಪರವಾಗಿಲ್ಲ ಕಣೋ ಚಿರು. ನಿನ್ನ ನಾನ್ ಅರ್ಥ ಮಾಡ್ಕೊಳ್ದೆ ಇನ್ಯಾರ್ ಮಾಡ್ಕೋತಾರೆ ಹೇಳು.ನಾನ್ ನಿನ್ನ ಪ್ರೀತ್ಸೋ ವಿಷ್ಯ ನಿನ್ನತ್ರ ಹೇಳ್ದೆ ಮನಸ್ಸು ತುಂಬಾ ಭಾರ ಆಗಿತ್ತು.ಆ ಭಾರ ಇಳಿಸ್ಕೊಬೇಕು ಅಂತ ಹೇಳ್ದೆ ಅಷ್ಟೇ.ನಿನ್ನ ಯಾವುದಕ್ಕೂ ನಾನ್ ಬಲವಂತ ಮಾಡಲ್ಲ ಕಣೋ.ಈಗ ಸ್ವಲ್ಪ ಮನಸ್ಸಿಗೆ ಸಮಾಧಾನ ಆಗ್ತಿದೆ”ಎಂದು ಬಂಧನದಿಂದ ಹಿಂದೆ ಸರಿದು “ನಡಿ ಮನೆಗೋಗೋಣ”ಎಂದಳು.
“ನಿಧಿ ಆರ್ ಯು ಓಕೆ”ಎಂದ ಚಿರು ಕಾಳಜಿಯಿಂದ.
“ನಂಗೇನೋ ಆಗಿದೆ ನಡಿ ಮನೆಗ್ ಹೋಗೋಣ”ಎಂದು ಬರದೇ ಇರುವ ನಗುವಲ್ಲಿ ತುಟಿಯಂಚಿನಲ್ಲಿ ತಂದು ನಗುತ್ತಾ ಬೈಕಿನ ಬಳಿ ಬಂದು ನಿಂತಳು.
ನಿಧಿ ನಗುವನ್ನು ಕಂಡ ಚಿರು ಸ್ವಲ್ಪ ಸಮಾಧಾನಗೊಂಡು ನಿಧಿಯನ್ನು ಕರೆದುಕೊಂಡು ಮನೆಗೆ ಬಂದ.
🛡️ಚಿರಂತನ ಸ್ನೇಹ ಕವಚ
ಮನೆಗೆ ಬಂದ ನಿಧಿಗೆ ಮೀರಾಳ ವಿಷಯ ನೆನಪಿಗೆ ಬಂತು.ಅದನ್ನು ಚಿರುಗೆ ಹೇಳಬೇಕೆಂದುಕೊಂಡು”ಚಿರು”ಎಂದು ಕರೆದಳು.
“ಏನ್ ನಿಧಿ”ಎನ್ನುತ್ತಾ ಹಿಂದೆ ತಿರುಗಿದ.
“ನಾನ್ ನಿನ್ ಹತ್ರ ಇನ್ನೂ ಒಂದು ವಿಷ್ಯ ಮಾತಾಡಬೇಕು”ಎಂದಳು.
“ಮತ್ತೆನಮ್ಮ ಹೇಳ್ಬೇಕು ನೀನು”ಎಂದ.
“ಟೆನ್ಷನ್ ತಗೋಬೇಡ ಇದು ಲವ್ ಮ್ಯಾಟರ್ ಅಲ್ಲ”ಎಂದಳು ನಗುತ್ತಾ.
“ನಗೋದು ಬಿಟ್ಟು ಅದೇನ್ ಹೇಳ್ಬೇಕೋ ಬೇಗ ಹೇಳು”ಎಂದ.
“ಹ್ಮ್.ಇವತ್ತು ಮೀರಾಳಿಗೆ ಒಂದು ದೌಟು ಬಂದಿದೆ”
“ಏನ್ ದೌಟು”ಎಂದು ಕೇಳಿದ ಆಶ್ಚರ್ಯದಿಂದ.
“ಮೀರಾಳನ್ನು ಯಾರೋ ದೂರದಿಂದ ನೋಡೊ ತರ ಫಾಲೋ ಮಾಡೋ ತರ ಅನಿಸ್ತಂತೆ”
“ಹೌದಾ ಯಾವಾಗ್ಲಿಂದ”ಪ್ರಶ್ನಾರ್ಥಕವಾಗಿ ಕೇಳಿದ.
“ಯಾವಾಗ್ಲಿಂದಾನೋ ಗೊತ್ತಿಲ್ಲಾ.ಆದ್ರೆ ಅವ್ಳ್ ಹೇಳಿದ್ ಮಾತ್ರ ಇವತ್ತು ಬೆಳಗ್ಗೆ.ನನ್ಗೆ ಆ ತನು ಅವ್ರ ಅಪ್ಪ ಶಿವರಾಮ್ ಮೇಲೆ ದೌಟು ಬರ್ತಿದೆ”
“ದೌಟಲ್ಲ ನಿಧಿ ಅದೇ ನಿಜ.ನಮ್ಗೆ ಅವ್ರ್ ಬಿಟ್ರೆ ಬೇರೆ ಯಾರು ಶತ್ರುಗಳಿಲ್ಲ.ಈ ಕೆಲಸ ಖಂಡಿತ ಅವರದ್ದೇ”
“ಹಾಗಿದ್ರೆ ಈಗೇನ್ ಮಾಡೋದು ಚಿರು”
“ಇನ್ಮೇಲೆ ಪ್ರತಿದಿನ ಮೀರಾ ನಕುಲ್ ರನ್ನು ಪಾಲೋ ಮಾಡ್ತಿರ್ತೀನಿ ಅವರಿಗೆ ಯಾವ್ದೆ ತೊಂದರೆ ಬರದಿರೋ ಹಾಗೇ ನಾನ್ ನೋಡ್ಕೋತೀನಿ. ನೀನಿದರ ಬಗ್ಗೆ ಚಿಂತೆ ಮಾಡ್ಬೇಡ”
“ಎಸ್ಟ್ ದಿನ ಅಂತ ಫಾಲೋ ಮಾಡ್ತಿಯಾ.ಬೇಗ ಅದಕ್ಕೊಂದು ಪರಿಹಾರ ಹುಡ್ಕು”
“ಆದಷ್ಟು ಬೇಗ ಹುಡುಕ್ತಿನಿ ನಿಧಿ.ನೀನ್ ಟೆನ್ಷನ್ ತಗೋಬೇಡ”
“ಹ್ಮ್ ಸರಿ ಚಿರು”ಎಂದವಳೇ ಮನೆಯೊಳಗೇ ಹೋದಳು.
ಅಂದಿನಿಂದ ಎರಡು ವರ್ಷ ನಕುಲ್, ಮೀರಾಳನ್ನು ಕಣ್ಣಾಗಿ ಕಾಪಾಡಿಕೊಂಡು ಬಂದನು. ಮೂವರು ಎಂಎಸ್ಸಿ ಮುಗಿಸಿದರು.ಮೂವರಿಗೂ ಬೆಂಗಳೂರಿನ ಒಂದೇ ಕಂಪೆನಿಯಲ್ಲಿ ಕೆಲಸವೂ ಸಿಕ್ಕಿತು.ಆದರೆ ನಿಧಿ ಕೆಲಸಕ್ಕೆ ಹೋಗಲು ಇಚ್ಛಿಸಿರಲಿಲ್ಲ ಬದಲಾಗಿ ಅವಳು ಅಬ್ರಾಡಲ್ಲಿ ಪಿಎಚ್ಡಿ ಪದವಿ ಪಡೆಯಬೇಕೆಂದು ನಿರ್ಧರಿಸಿ ವೀಸಾ ಪಾಸ್ಪೋರ್ಟ್ ಗಾಗಿ ಕಾಯುತ್ತಿದ್ದಳು.

ಮೀರಾ,ನಕುಲ್ ಬೆಂಗಳೂರಲ್ಲಿ ಕೆಲಸಕ್ಕೆ ಸೇರಿಕೊಂಡರು.ಅಲ್ಲೇ ಮನೆಮಾಡಿಕೊಂಡಿದ್ದರು.ಕೆಲಸಕ್ಕೆ ಹೋಗುವಾಗ ಬರುವಾಗ ಯಾವುದೇ ತರಹದ ತೊಂದರೆಯಾಗದ ಹಾಗೇ ನೋಡಿಕೊಳ್ಳೋಕೆ ಅಂತ ಚಿರು ವ್ಯವಸ್ಥೆ ಮಾಡಿಕೊಂಡಿದ್ದ.ಅದರಂತೆಯೇ ಅವರನ್ನು ಕಣ್ಣಾಗಿ ಕಾಯುತ್ತಿದ್ದ.
ಹೀಗೆ 3 ತಿಂಗಳು ಕಳೆದವು.ಮೀರಾ ನಕುಲ್ ಗೆ ಮದುವೆ ಮಾಡಬೇಕೆಂದು ಪ್ರಕಾಶ್,ಕುಸುಮ, ಮೋಹನ್ ನಿರ್ಧರಿಸಿ ಮಾಡಿ ಮಡಿಕೇರಿಗೆ ಬರಲು ಹೇಳಿದರು.
ಬೆಂಗಳೂರಿನಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡ್ತಿದಾರೆ ಎಂದು ತಿಳಿದಿದ್ದ ಶಿವರಾಮ್. ಮೀರಾಳನ್ನು ಕೊಂದು, ನಕುಲನನ್ನು ತನ್ನ ಮಗಳು ತನುಗೆ ಕೊಟ್ಟು ಮದುವೆ ಮಾಡಬೇಕೆಂದು ಕೊಂಡಿದ್ದ.ಆದರೆ ಚಿರು ಅದಕ್ಕೆ ಅವಕಾಶ ಕೊಡದೆ ಕಾಡಿಸುತಿದ್ದ.ಆದರೂ ಸರಿಯಾದ ಸಮಯಕ್ಕೆ ನರಿಯಂತೆ ಹೊಂಚು
ಹಾಕುತಿದ್ದ.
ಮೋಹನ್, ಕುಸುಮ ಅವರ ಮದುವೆ ಮಾಡಲು ನಿರ್ಧರಿಸಿ ಅವರನ್ನು ಬೆಂಗಳೂರಿಂದ ಮಡಿಕೇರಿಗೆ ಬರಲು ಹೇಳಿದ್ದಾರೆ ಎಂಬ ವಿಷಯ ತಿಳಿದ ಶಿವರಾಮ್ ಸಂಭ್ರಮಿಸಿದನು.ಮೀರಾಳನ್ನು ಕೊಲ್ಲಲು ಇದೆ ಸರಿಯಾದ ಸಮಯ ಎಂದು ತಿಳಿದು ಮಾರ್ಗಮಧ್ಯದಲ್ಲಿ ಅವರನ್ನು ಕೊಲ್ಲಲು ರೌಡಿಗಳನ್ನು ನೇಮಿಸಿದ್ದ.
ಈ ವಿಷಯ ತಿಳಿಯದ ಮೀರಾ,ನಕುಲ್ ಮಡಿಕೇರಿಗೆ ಪ್ರಯಾಣ ಬೆಳೆಸಲು ನಿರ್ಧರಿಸಿದ್ದರು.
ಸ್ನೇಹ ಚಿರಾಯು-17 ಮುಂದುವರೆಯುವುದು…..
ಈ ಸ್ನೇಹ ಚಿರಾಯು-17 ನೀವು ಇಂಗ್ಲಿಷ್ ಭಾಷೆಯಲ್ಲಿಯೂ ಓದಬಹುದು.
ನಮ್ಮ ವೆಬ್ಬೆಟ್ ನ ಇತರ ಪೋಸ್ಟ್ ಗಳನ್ನು ಇಲ್ಲಿ ಓದಬಹುದು.

