ಸ್ನೇಹ ಚಿರಾಯು-7

ಸ್ನೇಹ ಚಿರಾಯು-7

ಸ್ನೇಹ ಚಿರಾಯು-7 ತಂದೆಯನ್ನು ನೆನೆದು ಭಯದಿಂದ ಎದ್ದು ಕುಂತ ಚಿರಂತ್ “ಈಗ್ಲೇ ಮೇಡಂನ ಕೇಳೋಣ ಯಾವಾಗ್ ನನ್ನನ್ನು ಇಲ್ಲಿಂದ ಡಿಸ್ಚಾರ್ಜ್ ಮಾಡ್ತಾರೆ ಅಂತ.ಮನೇಲಿ ಅಪ್ಪ ಒಬ್ರೇ ಇದಾರೆ”ಎಂದು ತನ್ನಲ್ಲೇ ಅಂದುಕೊಂಡು ತುಳಸಿಯನ್ನು ಹುಡುಕುತ್ತಾ ಹೊರಟ.

ಅಲ್ಲಿ ತುಳಸಿ ನಿಧಿ ನನ್ನ ಆರೋಗ್ಯದ ಬಗ್ಗೆಯೇ ಮಾತನಾಡುತ್ತಿರುವುದು ಎಂದು ತಿಳಿದ ಚಿರಂತ್ ಅಲ್ಲೇ ಬಾಗಿಲ ಬಳಿ ನಿಂತು ಅವರ ಮಾತನ್ನು ಆಲಿಸಲು ಶುರುಮಾಡಿದ.

“ಅವನಿಗೆ ಚೈಲ್ಡ್ವುಡ್ ಅಲ್ಜೈಮರ್(childhood alzheimer) ಅನ್ನೋ ಕಾಯಿಲೆ ಇದೆ.ಇದು ಒಂದು ಮರೆವಿನ ಕಾಯಿಲೆ. ಸುಮಾರು 77000 ಸಾವಿರ ಜನರಲ್ಲಿ ಒಬ್ಬರಿಗೆ ಬರುವಂತದ್ದು.

ಚಿರಂತ್ಗೆ ಈ ಕಾಯಿಲೆ ಕಳೆದ 5 ವರ್ಷಗಳ ಹಿಂದೆಯೇ ಶುರುವಾಗಿದೆ ಆದರೆ ಅದು ಅವನ ಅರಿವಿಗೆ ಬಂದಿಲ್ಲ”ಎಂದು ಅವನ ಕಾಯಿಲೆ ಬಗ್ಗೆ ನಿಧಿಗೆ ವಿವರಿಸಿದಳು ತುಳಸಿ.

“ಮರೆವಿನ ಕಾಯಿಲೆ ಎಂದರೆ ಎಲ್ಲರನ್ನು ಮರೆತು ಹೋಗ್ತಾರಾ”ಎಂದು ಭಯಮಿಶ್ರಿತ ದನಿಯಲ್ಲಿ ಕೇಳಿದಳು ನಿಧಿ.

“ಇಲ್ಲ ಮರಿ, ಅವನಿಗೆ ತುಂಬಾ ಇಷ್ಟ ಆದವರು, ಮತ್ತೆ ಅವನನ್ನು ತುಂಬಾ ಇಷ್ಟ ಪಡುವವರು ಸಾಧ್ಯವಾದಷ್ಟು ನೆನಪಿನಲ್ಲಿರುತ್ತಾರೆ.ಹೊಸಬರನ್ನು ನೆನಪಿನಲ್ಲಿಟ್ಟುಕೊಳ್ಳುವುದು ತುಂಬಾ ಕಷ್ಟ ಅದಕ್ಕೆ ಆಗಲೇ ನನ್ನ ಯಾರು ಅಂತ ಕೇಳಿದ್ದು”ಎಂದಳು ಭಾವುಕಳಾಗಿ.

“ಅಯ್ಯೋ ಮಮ್ಮಿ…!ಈ ಕಾಯಿಲೆಗೆ ಔಷಧಿನೇ ಇಲ್ವಾ.ಅವರನ್ನು ಉಳಿಸಿಕೊಳ್ಳಲು ಸಾಧ್ಯನೇ ಇಲ್ವಾ”

“ಇದಕ್ಕೆ ನಿರ್ದಿಷ್ಟ ಔಷಧ ಇನ್ನು ಕಂಡು ಹಿಡಿದಿಲ್ಲ ಪುಟ್ಟ.ಅವನ ಈಗಿನ ಅರೋಗ್ಯ ಸ್ಥಿತಿ ನೋಡಿದ್ರೆ ರೋಗನಿರ್ಣಯ(diagnosis) ಮಾಡಿದ್ರೆ ಕೇವಲ ಎರಡರಿಂದ ನಾಲ್ಕು ವರ್ಷದವರೆಗೆ ಬದುಕಬಹುದು. ಇದು ಬಿಟ್ಟರೆ ಬೇರೆ ಯಾವ ದಾರಿಯು ಇಲ್ಲ”ಎಂದಳು ನಿರ್ಲಿಪ್ತ ಭಾವದ ದನಿಯಲ್ಲಿ.

ಚಿರಂತ್ ಇನ್ನು ಕೆಲವು ವರ್ಷಗಳಷ್ಟೇ ಬದುಕುವ ಸತ್ಯವನ್ನು ತಿಳಿದ ನಿಧಿ ಉಸಿರಾಡುವ ಗೊಂಬೆಯಂತೆ ನಿಂತುಬಿಟ್ಟಳು.ನಿಧಿಗೆ ಚಿರಂತ್ ಒಂದು ಭೇಟಿಯ ಪರಿಚಯವಾದರು ಅವನೆಂದರೆ ಅವಳಿಗೇಕೋ ತಿಳಿಯದ ಸೆಳೆತ.

ಕಣ್ಣಾಲಿಗಳು ಅವಳ ಕೆನ್ನೆ ಸೋಕಿದ್ದವು.ತಾಯಿಯನ್ನು ತಬ್ಬಿಕೊಂಡು  ಚಿಕ್ಕಮಗು ಅಳುವಂತೆ ಅತ್ತುಬಿಟ್ಟಳು.ತುಳಸಿಯ ಕಣ್ಣಲ್ಲಿಯೂ ಹನಿಗೂಡಿದವು.

ಇವರಿಬ್ಬರ ಸಂಭಾಷಣೆಯನ್ನು ಹೊರಗಿನಿಂದ ಕೇಳಿಸಿಕೊಳ್ಳುತ್ತಿದ್ದ ಚಿರಂತ್ ಅವನ ಅರೋಗ್ಯ ಸ್ಥಿತಿ ನೆನೆದು ತಬ್ಬಿಬ್ಬಾಗಿ ಕುಸಿದು ಬಿದ್ದ. ನಾನೇಕೆ ಮೀರಾಳಂತೆ ಓದಲಾಗಲಿಲ್ಲ ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ದೊರಕಿತ್ತು.ಮುಂದಿನ ಭವಿಷ್ಯದ ದಾರಿ ನೆನೆದು ದುಃಖಿತನಾದ.

ಮೀರಾಳ ಓದು, ಮದುವೆ ಹಾಗೂ ತಂದೆ ಪ್ರಕಾಶನ ಒಂಟಿ ಜೀವನ ಹೀಗೆ ನೂರಾರು ಉತ್ತರ ಸಿಗದ ಪ್ರಶ್ನೆಗಳನ್ನು ನೆನೆದು ಗೊಂದಲದಿಂದ ಅಲ್ಲಿಂದ ಎದ್ದು ಹೊರಟ.

ತಾಯಿಯ ಅಪ್ಪುಗೆಯಿಂದ ಸಡಲಿಸಿಕೊಂಡ ನಿಧಿ  “ಅಮ್ಮ ಈಗ ಏನ್ಮಾಡೋದು”ಎಂದು ಕೇಳಿದಳು.

“ಅದ್ನೇ ಪುಟ್ಟ, ನಾನು ಯೋಚ್ನೆ ಮಾಡ್ತಿದೀನಿ. ಮೀರಾಳಿಗೆ ಹೇಳೋಣವೆಂದರೆ ಅವನಿಗೆ ತಲೆಗೆ ಒಂಚೂರು ಪೆಟ್ಟು ಬಿದ್ದಿದ್ದೆ ಅವಳಿಗೆ ಸಹಿಸಿಕೊಳ್ಳಲಾಗಲಿಲ್ಲ ಇನ್ನು ಇದನ್ನು ಹೇಳಿದರೆ ಏನಾಗುವುದೋ ಎಂಬ ಭಯ”.

“ಹೋಗ್ಲಿ ಅವರಪ್ಪನಿಗೆ ವಿಷಯ ಮುಟ್ಟಿಸಿದರೆ ಹೇಗೆ.ಹೌದು ಅಮ್ಮ ನಮಗಿರುವುದು ಇದೊಂದೇ ದಾರಿ ಅವರಪ್ಪನಿಗೆ ವಿಷಯ ಮುಟ್ಟಿಸೋಣ”

“ಬೇಡ ಮರಿ, ತನ್ನ ಮಗ ಸಾಯುವ ವಿಷಯವನ್ನು ತಿಳಿದು ಯಾವ ತಂದೆಯಾದರು ಹೇಗೆ ತಡೆದುಕೊಳ್ಳಲು ಸಾಧ್ಯ.ಇದು ಅವರ ಆರೋಗ್ಯದ ಮೇಲೆಯೂ ಪರಿಣಾಮ ಬೀಳಬಹುದು. ಆದ್ದರಿಂದ ಯಾರಿಗೂ ತಿಳಿಯದೆ ಹಾಗೇ ಜಾಗರೂಕತೆ ವಹಿಸಿ ಆದಷ್ಟು ಬೇಗ  ಟ್ರೀಟ್ಮೆಂಟ್ ಕೊಡಲು ಶುರುಮಾಡಬೇಕು”.

ಇಲ್ಲಿದ್ದುಕೊಂಡು ಮೀರಾಗೆ ಗೊತ್ತಿಲ್ಲದೇ ಟ್ರೀಟ್ಮೆಂಟ್ ಕೊಡೋಕೆ ಸಾಧ್ಯನೇ ಇಲ್ಲ ಮಮ್ಮಿ. ಅವಳಿಗೆ ಗೊತ್ತಾಗೇ ಗೊತ್ತಾಗುತ್ತದೆ”

“ಹೌದು ಪುಟ್ಟ ಇದಕ್ಕೆ ನಾವೇ ಏನಾದರು ಒಂದು ಉಪಾಯ ಹುಡುಕಬೇಕು”ಎಂದು ಇಬ್ಬರು ಯೋಚನೆಯಲ್ಲಿ ತೊಡಗಿದರು.

ಸ್ವಲ್ಪ ಸಮಯದ ಬಳಿಕ ಅಲ್ಲಿಗೆ ಬಂದ ನರ್ಸ್ “ಮೇಡಂ ಪೇಶೆಂಟ್ ಚಿರಂತ್ ಕಾಣ್ತಾ ಇಲ್ಲ”ಎಂದು ಗಾಬರಿಯಿಂದ ನುಡಿದಳು.

ಇದನ್ನು ಕೇಳಿದ ನಿಧಿ,ತುಳಸಿ ಗಾಬರಿಯಾದರು. “ವಾಟ್…!ಚಿರಂತ್ ಕಾಣ್ತಾ ಇಲ್ವಾ…? ಏನ್ ಹೇಳ್ತಿದೀಯಾ”ಎಂದು ನರ್ಸ್ನನ್ನು ಪ್ರಶ್ನಿಸಿದರು ತುಳಸಿ.

“ಈಗ ತಾನೇ ಟ್ಯಾಬ್ಲೆಟ್ ತಗೊಂಡು ಮಲಗಿದ್ರು ಅಷ್ಟ್ ಬೇಗ ಎಲ್ಲಿಗೆ ಹೋಗ್ತಾರೆ. ಅಲ್ಲೇ ಎಲ್ಲಾದ್ರೂ ಇರ್ತಾರೆ ನೋಡಿ”ಎಂದಳು ನಿಧಿ.

“ಇಲ್ಲ ಮೇಡಂ, ಎಲ್ಲಾ ಕಡೆ ಹುಡುಕಿದ ಮೇಲೇನೆ ನಿಮಗೆ ಹೇಳಲು ಬಂದಿದ್ದು”

ತುಳಸಿ ನಿಧಿಯ ಮುಖ ನೋಡುತ್ತಾ”ನಿಧಿ ಈ ಟೈಂಮಲ್ಲಿ ಚಿರಂತ್ ಒಂಟಿಯಾಗಿರುವುದು ತುಂಬಾನೇ ಅಪಾಯ.ಎಲ್ಲಿದ್ದರೂ ಅವನನ್ನು ಬೇಗ ಹುಡುಕಬೇಕು.ನಡಿ ಹುಡುಕೋಣ “ಎಂದು ಕಾರಿಡಿದು ಹುಡುಕಲು ಹೊರಟರು.

ರಾತ್ರಿಯ ಕತ್ತಲೆಯಲ್ಲಿ ತಿಳಿಯದ ದಾರಿಯನ್ನಿಡಿದು ಮುಂದೆ ಸಾಗಿದ ಚಿರಂತ್. ಮಡಿಕೇರಿ ನಗರ ಬಿಟ್ಟು ಒಂದೆರಡು ಕಿಲೋಮೀಟರ್ ನಡೆದ ನಂತರ ಔಷಧಿಯ ಮತ್ತಿನಿಂದ ತೂಕಡಿಕೆ ಹತ್ತಿದಂತಾಗಿ ಅಲ್ಲೇ ಹತ್ತಿರದಲ್ಲಿದ್ದ ದೇವಸ್ಥಾನ ಬಳಿ ಬಂದು ಅಲ್ಲೇ ನಿದ್ರೆಗೆ ಜಾರಿದನು.

ನಿಧಿ, ತುಳಸಿ ಮಡಿಕೇರಿ ನಗರದಲ್ಲೆಲ್ಲಾ ಹುಡುಕಾಡಿದರು. ರಾತ್ರಿಯೆಲ್ಲ ಹುಡುಕಿದರೂ  ಚಿರಂತನ ಸುಳಿವೇ ದೊರಕಲಿಲ್ಲ.

ಬೆಳಗ್ಗೆ ಸಮಯ 6 ಗಂಟೆಯಾದರೂ ಕಾಣದೆ ಇದ್ದಾಗ ಪೊಲೀಸ್ ಗೆ ದೂರು ಕೊಡಲು ತೀರ್ಮಾನಿಸಿದರು ತುಳಸಿ.

“ನಿಧಿ ನೀನ್ ಮನೆಗೆ ಹೋಗು.ನಾನ್ ಪೊಲೀಸ್ ಗೆ ಕಂಪ್ಲೇಂಟ್ ಕೊಟ್ಟು ಬರ್ತೀನಿ”ಎಂದು ನಿಧಿಯನ್ನು ಆಟೋದಲ್ಲಿ ಮನೆಗೆ ಕಳುಹಿಸಿದ ತುಳಸಿ ಕಾರಿನಲ್ಲಿ ಪೊಲೀಸ್ ಸ್ಟೇಷನ್ ಕಡೆ ಹೊರಟಳು.

ಆಟೋದಲ್ಲಿ ಮನೆಯ ಕಡೆ ಹೊರಟ್ಟಿದ್ದ ನಿಧಿ ದೇವಸ್ಥಾನಕ್ಕೆ ಹೋಗಿ ಚಿರಂತ್ ಸಿಗಲೆಂದು ದೇವರ ಆಶೀರ್ವಾದ ಪಡೆಯುವ ಸಲುವಾಗಿ ದೇವಸ್ಥಾನಕ್ಕೆ ಹೋಗಲು ಬಯಸಿದಳು.ಆಟೋ ಡ್ರೈವರ್ ನನ್ನು ಕುರಿತು “ಸರ್ ಸ್ವಲ್ಪ ಸಿಟಿಯಿಂದ  ಒಂದೆರಡು ಕಿಲೋಮೀಟರ್ ಆಚೆ ಇರೋ ಶಿವ ದೇವಸ್ಥಾನದ ಕಡೆ ತಿರುಗಿಸಿ”ಎಂದು ದೇವಸ್ಥಾನ ಕಡೆ ಹೋದಳು.

ಸಮಯ ಬೆಳಗ್ಗೆ 6 ಗಂಟೆಯಾದಾಗ ಅಲ್ಲಿಗೆ ಬಂದ ದೇವಸ್ಥಾನದ ಪೂಜಾರಿ”ಯಾರಪ್ಪ ನೀನು ಇಲ್ಲೇಕೆ ಮಲಗಿದ್ದೀಯಾ ಎದ್ದೇಳು ಭಕ್ತರು ಬರುವ ಹೊತ್ತಾಯಿತು”ಎಂದು ನಿದ್ದೆಯಿಂದ ಎಚ್ಚರಿಸಿದರು.

ನಿದ್ದೆಯಿಂದ ಎದ್ದ ಚಿರಂತ್ ನಾನೇಕೆ ಇಲ್ಲಿ ಮಲಗಿದ್ದೇನೆ. ರಾತ್ರಿ ಏನೆಲ್ಲಾ ನಡೆಯಿತು ಎಂದು ಕಷ್ಟಪಟ್ಟು ನೆನಪಿಗೆ ತಂದುಕೊಂಡಾಗ  ಅವನ ಆರೋಗ್ಯದ ಬಗ್ಗೆ ತುಳಸಿ ನಿಧಿ ಮಾತಾಡಿಕೊಂಡಿದ್ದು ಅದನ್ನು ಕೇಳಿಸಿಕೊಂಡಿದ್ದು ಎಲ್ಲಾ ನೆನಪಾಯಿತು.

ಅಲ್ಲೇ ಇದ್ದ ನದಿಯಲ್ಲಿ ಮುಖ ತೊಳೆದುಕೊಂಡು ದೇವಸ್ಥಾನಕ್ಕೆ ಬರುವಷ್ಟರಲ್ಲಿ ಅಲ್ಲಿಗೆ ಬಂದ ನಿಧಿ ಚಿರಂತನನ್ನು ಕಂಡು ಹರ್ಷಿತಳಾದಳು.ಕೂಡಲೇ ಮರೆಯಲ್ಲಿ ನಿಂತು ತುಳಸಿಗೆ ಮಾಹಿತಿ ಕೊಟ್ಟಳು.

ತುಳಸಿ “ಅಲ್ಲೇ ಇರು ಪುಟ್ಟ ನಾನೀಗ ಬರ್ತೇನೆ”ಎಂದು ತುಳಸಿಯು ಸಹ ದೇವಸ್ಥಾನದ ಕಡೆ ಹೊರಟಳು.

ಮುಖ ತೊಳೆದುಕೊಂಡು ಬಂದ ಚಿರಂತ್ ದೇವರಿಗೆ ಕೈಮುಗಿದು”ದೇವರೇ ಚಿಕ್ಕಂದಿನಿಂದಲೂ ನಾನೇನು ನಿನ್ನ ಕೇಳಿಲ್ಲ.ಈಗ ನನ್ನ ಆರೋಗ್ಯದ ವಿಷಯ ತಿಳಿದ ಮೇಲೆ ನಾನ್ ಒಂದು ಕೇಳ್ಬೇಕು ಅನ್ಕೊಂಡಿದೀನಿ.ಜಾಸ್ತಿ ಏನಿಲ್ಲ.

ನನ್ನ ಅದ್ಯಾವಾಗ ಇಲ್ಲಿಂದ ಕರ್ಕೊಂಡು ಹೋಗ್ತಿಯೋ ಗೊತ್ತಿಲ್ಲ ಇದ್ದಷ್ಟು ದಿನ ನನಗೆ ಚೆನ್ನಾಗಿ ದುಡಿಯಲು ಶಕ್ತಿ ಸಾಮರ್ಥ್ಯ ಕೊಡು.

ಯಾಕಂದ್ರೆ ಮೀರಾಳ ಓದು, ಮದುವೆ ಇವೆಲ್ಲ ಅಪ್ಪ ಒಬ್ಬನೇ ನಿಭಾಯಿಸೋದು ಕಷ್ಟ.ಹಾಗೇ ಅವರಿಗೂ ಸಹ ಕೊನೆಕಾಲದಲ್ಲಿ ದುಡಿಯೋದು ಕಷ್ಟವಾಗಬಹುದು.

ಆದ್ದರಿಂದ ನಾನು ಬದುಕಿದ್ದಷ್ಟು ದಿನ ಚೆನ್ನಾಗಿ ದುಡಿದು ಹಣ ಕೂಡಿಟ್ಟು ನನ್ನ ತಂದೆಗೆ ಸಹಾಯ ಮಾಡ್ಬೇಕು ಅನ್ಕೊಂಡಿದೀನಿ ಇದಕ್ಕೆ ನಿನ್ನ ಸಹಕಾರ ನನ್ಗೆ ಬೇಕು”ಎಂದು ತನ್ನ ಅಂತರಾಳದಲ್ಲಿದ್ದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ.

ಚಿರಂತ್ಗೆ ಅವನ ಆರೋಗ್ಯದ ವಿಷಯ ತಿಳಿದಿದೆ ಎಂದು ಗಾಬರಿಯಾದಳು.ಹೇಗೆ ತಿಳಿಯಿತು ಎಂಬ ಗೊಂದಲವು ಆಯಿತು.

ಇದನ್ನೆಲ್ಲಾ ಬದಿಗೊತ್ತಿ ಚಿರಂತನ ಬಳಿಬಂದು “ಏನ್ ಸರ್ ದೇವರಿಗೆ ಏನೋ ಅಪ್ಲಿಕೇಶನ್ ಹಾಕ್ತಾ ಇರೋ ಹಾಗಿದೆ”ಎಂದು ಬಂದು ಮುಂದೆ ನಿಂತಳು.

ದಿಕ್ಕೇ ತೋಚದ ಚಿರಂತ್ ಅವಳ ಪ್ರಶ್ನೆಗೆ ಉತ್ತರಿಸದೆ ಮುಂದೆ ಸಾಗಿದ.ಅವನನ್ನು ತಡೆದ ನಿಧಿ “ಲೋ ಕೋತಿ ಕಿವಿ ಕೇಳಲ್ವಾ ನಿನ್ಗೆ, ಅಥವಾ ನಾನ್ ಯಾರ್ ಅಂತ ಮರೆತೇ ಹೋಗಿದ್ಯಾ “ಎಂದು ಛೇಡಿಸಿದಳು.

“ಪ್ಲೀಸ್ ನಿಧಿಯವರೇ ನನ್ನ ಪಾಡಿಗೆ ನನ್ನ ಬಿಟ್ಟುಬಿಡಿ. ನನಗೆ ಸಮಯವಿಲ್ಲ ಬೇಗ ನಾನು ಸಾಯುವುದರೊಳಗೆ ನನ್ನಿಂದ ಎಷ್ಟು ಸಾಧ್ಯನೋ ಅಷ್ಟು ಹಣವನ್ನು ಕೂಡಿಡಬೇಕು”ಎಂದ.

“ನಿನ್ಗೆ ಸಾವು ಅಷ್ಟು ಹತ್ತಿರದಲ್ಲೇನೂ ಇಲ್ಲ ನಡಿ ಅಮ್ಮ ನಿಮಗೋಸ್ಕರ ಹುಡುಕಾಡ್ತಿದಾರೆ  ಹಾಸ್ಪಿಟಲ್ಗೆ ಹೋಗೋಣ”

“ನನ್ನ ಸಾವು ತುಂಬಾ ಹತ್ತಿರದಲ್ಲೇ ಇದೆ ಎಂದು ನನಗೆ ಗೊತ್ತು. ರಾತ್ರಿ ನೀವು ನಿಮ್ಮ ಅಮ್ಮ ಮಾತಾಡುತ್ತಿರುವುದನ್ನು ನಾನು ಕೇಳಿಸಿಕೊಂಡೆ ಇನ್ನು ನನ್ನ ಹತ್ತಿರ ಸುಳ್ಳು ಹೇಳುವ ಅವಶ್ಯಕತೆ ಇಲ್ಲ”ಎಂದನು ನಿಸ್ಸಂದೇಹದಿಂದ.

ಅಷ್ಟರಲ್ಲಿ ಅಲ್ಲಿಗೆ ಬಂದ ತುಳಸಿ “ನಿನ್ನ ಕಾಯಿಲೆ ವಿಷಯ ನಿನಗೆ ತಿಳಿದಿದ್ದು ಒಳ್ಳೇದೇ ಆಯ್ತು. ಅದನ್ನು ಪಾಸಿಟಿವ್ ಆಗಿ ತಗೊಂಡು ನಾವ್ ಕೊಡೊ ಟ್ರೀಟ್ಮೆಂಟ್ ತಗೊಂಡ್ರೆ ನಿನ್ನ ಆಯಸ್ಸು ಈಗಿರುವ ಆಯಸ್ಸಿಗಿಂತ ಜಾಸ್ತಿ ಆಗುತ್ತೆ.ಅದಕ್ಕೆ ನಿನ್ನ ಪ್ರೋತ್ಸಾಹ ಬೇಕು”

“ಮೇಡಂ ಈಗ ನನಗೆ ಹಣದ ಅವಶ್ಯಕತೆ ತುಂಬಾ ಇದೆ.ಈ ಸಮಯದಲ್ಲಿ ನನ್ಗೆ ನನ್ನ ಚಿಕಿತ್ಸೆಗೆ ಹಣ ಸುರಿಯುವುದು ನನಗೆ ಇಷ್ಟವಿಲ್ಲ.ಪ್ಲೀಸ್ ನನ್ನ ಪಾಡಿಗೆ ನನ್ನ ಬಿಟ್ಟುಬಿಡಿ”

“ಏನ್ ಚಿರು ನಿನ್ನಿಂದ ಹಣ ಪಡೆಯುತ್ತೇನೆ ಎಂದು ಹೇಗಂದುಕೊಂಡೆ.ಪ್ರತಿವರ್ಷ ತಿಳಿಯದ ಸಾವಿರಾರು ರೋಗಿಗಳಿಗೆ ಉಚಿತ ಚಿಕಿತ್ಸೆ ಕೊಡುತ್ತಾ ಬಂದಿದೀನಿ.

ಇನ್ನು ನೀನು ನನ್ನ ಪ್ರಾಣವನ್ನು ಉಳಿಸಿದ್ದಿಯಾ ನಿನಗೆ ಚಿಕಿತ್ಸೆ ಕೊಡೋಕಾಗೋದಿಲ್ವ.ನೋಡ್ ಚಿರು ನನ್ಗೆ ನಿಧಿಗೆ ಬೇರೆ ಯಾರು ಇಲ್ಲ.ಅವಳಿಗೆ ನಾನು ನನಗೆ ಅವಳು ಇಷ್ಟೇ ನಮ್ಮ ಪ್ರಪಂಚ.

ಅದೇನೋ ಹೇಳ್ತಿದ್ದಲ್ವಾ ಆಗ್ಲೇ ಮೀರಾಳ ಓದು, ಮದುವೆ ಖರ್ಚು ಅದೆಲ್ಲಾ ನಾನೇ ನೋಡ್ಕೋತೀನಿ.ನಿಮ್ಮ ತಂದೆಯವರಿಗೂ ಸಹ ಕೊನೆವರೆಗೂ ನಾನೇ ಆಸರೆ ಆಗ್ತೀನಿ”ಎಂದು ಚಿರಂತನಿಗೆ ಭರವಸೆ ಕೊಟ್ಟಳು ತುಳಸಿ.

ತುಳಸಿಯ ಎರಡು ಕೈಗಳನ್ನು ಹಿಡಿದು ಕಣ್ಣಿಗೆ ಒತ್ತಿಕೊಂಡು”ಯಾವ್ ಜನ್ಮದಲ್ಲಿ ಏನ್ ಪುಣ್ಯ ಮಾಡಿದ್ನೋ ಗೊತ್ತಿಲ್ಲ. ಈ ಜನ್ಮದ ಕೊನೆಗಾಲದಲ್ಲಿ ಆಸರೆಯಾಗಿ ನಿಲ್ಲುತ್ತಿದ್ದಿರಿ. ನಿಮ್ಮ ಋಣವನ್ನು ನಾನು ಹೇಗೆ ತೀರಿಸಲಿ”ಎಂದು ಕಣ್ಣೀರಿಟ್ಟ. 

“ಈಗ ಋಣದ ಬಗ್ಗೆಯೆಲ್ಲಾ ಯಾಕೆ.ನಿನ್ಗೆ ಆದಷ್ಟು ಬೇಗ ಟ್ರೀಟ್ಮೆಂಟ್ ಸ್ಟಾರ್ಟ್ ಮಾಡ್ಬೇಕು. ಅದು ಮೀರಾಳಿಗೆ, ನಿಮ್ಮ ತಂದೆಯವರಿಗೆ ತಿಳಿಯಬಾರದು.ಅದಕ್ಕೆ ಏನ್ ಮಾಡೋದು ಹೇಳು”ಎಂದು ಪ್ರಶ್ನಿಸಿದಳು ತುಳಸಿ.

ಒಂದೆರಡು ನಿಮಿಷ ಯೋಚಿಸಿದ ಚಿರಂತ್ ಉಪಾಯವನ್ನು ಹುಡುಕಿ “ಮೇಡಂ ನಾನ್ ಹೇಳೋ ಹಾಗ್ ಮಾಡಿ”ಎಂದು ಹೇಳಿ ತನ್ನ ತಂದೆಗೆ ಕಾಲ್ ಮಾಡಿಕೊಟ್ಟ.

ಸ್ನೇಹ ಚಿರಾಯು-7 ಮುಂದುವರೆಯುವುದು…

ಈ ಸ್ನೇಹ ಚಿರಾಯು-7 ನೀವು ಇಂಗ್ಲಿಷ್ ಭಾಷೆಯಲ್ಲಿಯೂ ಓದಬಹುದು.

ನಮ್ಮ ವೆಬ್ಬೆಟ್ ನ ಇತರ ಪೋಸ್ಟ್ ಗಳನ್ನು ಇಲ್ಲಿ ಓದಬಹುದು.

ಸ್ನೇಹ ಚಿರಾಯು-7

Comments

No comments yet. Why don’t you start the discussion?

Leave a Reply

Your email address will not be published. Required fields are marked *